ಚನ್ನಮ್ಮನ ಕಿತ್ತೂರ : ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಈಕ್ವಿಟ್ಯಾಸ್ ಫೈನಾನ್ಸ್ ಸಿಬ್ಬಂದಿ ಮನೆಗೆ ಬಂದು ಮನೆ ಸೀಜ್ ಮಾಡಿದ್ದು, ಕುಟುಂಬಸ್ಥರು ಬೀದಿ ಪಾಲಾಗಿದ್ದಾರೆ.
ಕಿತ್ತೂರು ತಾಲೂಕಿನ ಬೈಲೂರು ಗ್ರಾಮದ ಯಲ್ಲವ್ವ ಬಸಪ್ಪ ಕುರಕುಂದ ಕುಟುಂಬಸ್ಥರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಧಾರವಾಡದ ಈಕ್ವಿಟ್ಯಾಸ್ ಫೈನಾನ್ಸ್ ಸಿಬ್ಬಂದಿ ಮನೆಗೆ ನೋಟಿಸ್ ಹಚ್ಚಿ ಮನೆಯನ್ನು ಸೀಜ್ ಮಾಡಿಕೊಂಡು ಹೋಗಿದ್ದಾರೆ.
ಸಾಯಂಕಾಲ ಕುಟುಂಬಸ್ಥರು ಮನೆ ಬಂದು ನೋಡಿ ಶಾಕ್ ಆಗಿದ್ದು, ಉಟ್ಟ ಬಟ್ಟೆಯಲ್ಲಿ ಬೀದಿ ಪಾಲಾಗಿದ್ದಾರೆ. ಮನೆಯಲ್ಲಿ ಮಕ್ಕಳು ಸೇರಿದಂತೆ ಒಟ್ಟು 8 ಜನ ವಾಸವಾಗಿದ್ದರು. ಈಗ ದಿಢೀರನೆ ಬೀದಿ ಪಾಲಾಗಿದ್ದ ಕುಟುಂಬಸ್ಥರಿಗೆ ಗ್ರಾಮಸ್ಥರು ಉಪಚಾರ ಮಾಡುತ್ತಿದ್ದಾರೆ.
ಸುಮಾರು 10 ವರ್ಷದ ಹಿಂದೆ ಸರ್ಕಾರದ ಆಶ್ರಯ ಯೋಜನೆ ಅಡಿ ಅನುದಾನ ಮಂಜೂರು ಆಗಿದೆ. ಅಲ್ಲದೇ ಮನೆಯಲ್ಲಿದ್ದ ಚಿಕ್ಕ ಮಕ್ಕಳ ಬಂಗಾರ ಮಾರಿ ಮನೆ ನಿರ್ಮಿಸಲಾಗಿದೆ. ಐದು ವರ್ಷದ ನಂತರ ಈಕ್ವಿಟ್ಯಾಸ್ ಫೈನಾನ್ಸ್ ನಲ್ಲಿ 8 ಲಕ್ಷ ಸಾಲ ಪಡೆದಿದ್ದಾರೆ. ಪ್ರತಿ ತಿಂಗಳು 15 ಸಾವಿರ ಕಂತುಗಳನ್ನು ಕಟ್ಟಲಾಗಿದೆ. ಒಟ್ಟು 9 ಲಕ್ಷಕ್ಕೂ ಹೆಚ್ಚು ಹಣ ತುಂಬಲಾಗಿದ್ದು, ಇನ್ನೂ 4 ಲಕ್ಷಕ್ಕೂ ಹೆಚ್ಚು ಹಣ ನೀಡಬೇಕು ಎಂದು ಫೈನಾನ್ಸ್ ಸಿಬ್ಬಂದಿ ಒತ್ತಡ ಮಾಡುತ್ತಿದ್ದಾರೆ ಎಂದು ಯಲ್ಲವ್ವ ಕುರಕುಂದ ತಮ್ಮ ಅಳಲು ತೋಡಿಕೊಂಡಿದ್ದಾರೆ.
Kshetra Samachara
24/01/2025 05:19 pm