ಕಾಗವಾಡ: ಕಲೆ ಅನ್ನೋದೇ ಹಾಗೆ ನೋಡಿ. ಆ ಸರಸ್ವತಿ ದೇವಿ ನಿಷ್ಠೆಯುಳ್ಳ ಕಾಯಕ ಯೋಗಿಗಳಿಗೆ ಒಂದಲ್ಲ ಒಂದು ದಿನ ಒಲಿದೇ ಒಲಿಯುತ್ತಾಳೆ. ಅನ್ನೋಕೆ ಈ ಯುವಕ ಸಾಕ್ಷಿಯಾಗಿದ್ದಾನೆ. ತಂದೆ ತಾಯಿ ಇಲ್ಲದೆ ಅನಾಥವಾಗಿ ಬೆಳೆದರೂ ಈ ಪೋರನ ಅಪ್ರತಿಮ ಪ್ರತಿಭೆಗೆ ಚಂದನವನದ ತಾರೆಯರೇ ನಾಚಿ ನೀರಾಗಿದ್ದಾರೆ.
ಈತನ ಹೆಸರು ವಿನೋದ ಸುತಾರ, ಓದಿದ್ದು 10ನೇ ಕ್ಲಾಸ್ ಮುಗಿಸಿ ITI ಪದವಿ ಪಡೆದಿದ್ದಾನೆ. ಇವನ ಟ್ಯಾಲೆಂಟ್ ಎಂಥದ್ದು ಅಂದ್ರೆ ತಾನು ಹೋಗೋ ದಾರಿ ಮಧ್ಯದಲ್ಲಿ ಸಿಗೋ ಕಲ್ಲು, ಕಟ್ಟಿಗೆ, ಮರದ ಎಲೆಗಳಲ್ಲೂ ಸಹ ಕಲೆಯನ್ನು ಹುಡುಕುವ ಪ್ರತಿಭಾವಂತ ಈ ಹುಡುಗ. ಈತ ಹುಟ್ಟಿದ್ದು ಕುಂದಾನಗರಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೊಳೆ ಅನ್ನೋ ಪುಟ್ಟ ಗ್ರಾಮದಲ್ಲಿ.
ಇತ ಹುಟ್ಟಿದ ಕೆಲವೆ ವರ್ಷದಲ್ಲಿ ತಾಯಿಯನ್ನು ಕಳೆದುಕೊಂಡ. ಬೆಳೆಯುತ್ತಾ ತಂದೆ ಕೂಡ ದೂರಾದರೂ ಅಜ್ಜಿಯ ಆಶ್ರಯದಲ್ಲಿ ಬೆಳೆದ ಈ ಹುಡುಗ ಮರದ ಎಲೆಗಳಲ್ಲೂ ಸಹ ಚಿತ್ರವನ್ನು ಹುಡುಕ ಬಲ್ಲ. ದೊಡ್ಡ ಸೆಲೆಬ್ರಿಟಿಗಳ ಭಾವಚಿತ್ರವನ್ನು ಮರದ ಎಲೆ ಕಟ್ಟಿಗೆ ಹಾಗೂ ಮುತ್ತು ನದಿ ಹಾಗೂ ಸಮುದ್ರದಲ್ಲಿ ದೊರಕುವ ವಿವಿಧ ಕಲ್ಲುಗಳಿಂದಲೂ ಕೂಡ ಚಿತ್ರಗಳನ್ನು ತೆಗೆದು ಜನ ಮೆಚ್ಚುಗೆ ಗಳಿಸಿದ್ದಾನೆ.
ಚಿತ್ರರಂಗದ ನಟರಾದ ಪುನೀತ್ ರಾಜಕುಮಾರ, ದರ್ಶನ್ ತೂಗುದೀಪ್, ಸುದೀಪ್, ಶಿವರಾಜ್ ಕುಮಾರ್, ಶೃತಿ, ಸಾಧು ಕೋಕಿಲ, ಜಗ್ಗೇಶ, ಚಂದನ್ ಶೆಟ್ಟಿ, ಹಲವು ತಾರೆಯರ ಚಿತ್ರಗಳನ್ನ ಬಿಡಿಸಿ ಅವರಿಗೆ ಗಿಫ್ಟ್ ನೀಡುವ ಮೂಲಕ ಪ್ರೀತಿ ಗಳಿಸಿದ್ದಾನೆ.
ಹಲವು ಜನನಾಯಕ ಚಿತ್ರಗಳನ್ನ ಬಿಡಿಸಿದ ವಿನೋದ ತನ್ನ 22ನೇ ವಯಸ್ಸಿನಲ್ಲಿ ಅದ್ಭುತ ಕಲೆ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದಿದ್ದಾನೆ.
PublicNext
11/12/2024 09:13 am