ಬೆಳಗಾವಿ: ದಸರಾ ಬಂದ್ರೆ ಸಾಕು ಕುಂದಾನಗರಿ ಬೆಳಗಾವಿಯ ಯುವ ಸಮೂಹ ಫುಲ್ ಖುಷ್. ಬೆಳಗ್ಗೆ ದುರ್ಗಾಮಾತಾ ದೌಡ್ ನಲ್ಲಿ ಯುವಸಮೂಹ ಭಾಗಿಯಾದ್ರೆ ಸಂಜೆಯಾಗುತ್ತಿದಂತೆ ಕಲರ್ಫುಲ್ ದಾಂಡಿಯಾ ಉತ್ಸವದಲ್ಲಿ ಭಾಗಿಯಾಗಿ ಹೆಜ್ಜೆ ಹಾಕಿ ಸಂಭ್ರಮಿಸುತ್ತಾರೆ. ಕನ್ನಡ ಮರಾಠಿ ಸೇರಿ ಉತ್ತರ ಭಾರತ ಸಂಸ್ಕೃತಿಗಳ ಸಂಗಮದಂತಿರುವ ಕಲರ್ ಫುಲ್ ನೈಟ್ಸ್ ನಲ್ಲಿ ದಾಂಡಿಯಾ ಉತ್ಸವ ಹೇಗೆ ಇರುತ್ತೆ ನೀವೊಮ್ಮೆ ನೋಡಿ
ಹೌದು, ಗಡಿಜಿಲ್ಲೆ ಬೆಳಗಾವಿಯಲ್ಲಿ ಯಾವುದೇ ಹಬ್ಬ ಆಚರಣೆಯಾಗಲಿ ತುಂಬಾ ವಿಶಿಷ್ಟವಾಗಿರುತ್ತೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಗಡಿಜಿಲ್ಲೆ ಬೆಳಗಾವಿಯಲ್ಲಿ ನಡೆಯುವ ಪ್ರತಿ ಹಬ್ಬದಲ್ಲಿ ಕನ್ನಡ ಮರಾಠಿ ಸಂಸ್ಕೃತಿಗಳ ಸಂಗಮ ಕಾಣಸಿಗುತ್ತೆ. ಅದರಂತೆ ದಸರಾ ವೇಳೆ ಹತ್ತು ದಿನಗಳ ಕಾಲ ನಡೆದ ದಾಂಡಿಯಾ ಉತ್ಸವದಲ್ಲಿ ಯುವಕ ಯುವತಿಯರು ಕೋಲಾಟ ಆಡಿ ಡಿಜೆ ಸಾಂಗ್ಗಳಿಗೆ ಸ್ಟೆಪ್ಸ್ ಹಾಕಿ ಸಖತ್ ಆಗಿ ಎಂಜಾಯ್ ಮಾಡ್ತಾರೆ.
ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ನಗರದ ಸರ್ದಾರ್ ಮೈದಾನದಲ್ಲಿ ದಸರಾ ನಿಮಿತ್ತ ವಿವಿಧ ಸಾಂಸ್ಕೃತಿಕ ಉತ್ಸವ ಆಯೋಜನೆ ಮಾಡಿದ್ದ ದಾಂಡಿಯಾ ಉತ್ಸವವನ್ನು ನೋಡವುದೇ ಒಂದು ಹಬ್ಬವಾಗಿತ್ತು.ಇನ್ನು ದಸರಾ ವೇಳೆ ಹತ್ತು ದಿನಗಳ ಕಾಲ ನಡೆಯುವ ದಾಂಡಿಯಾ ಉತ್ಸವ ವಿವಿಧತೆಯಲ್ಲಿ ಏಕತೆ ಸಾರುವ ಸಂಸ್ಕೃತಿ ಸಂಗಮ. ಕನ್ನಡ ಮರಾಠಿ ಗುಜರಾತಿ ರಾಜಸ್ಥಾನಿ ಸಾಂಪ್ರದಾಯಿಕ ಉಡುಗೆ ತೊಟ್ಟು ಆಯಾ ಭಾಷೆಯ ಸಾಂಪ್ರದಾಯಿಕ ಹಾಡುಗಳಿಗೆ ಕೋಲಾಟವಾಡುತ್ತಾ ಯುವಕ ಯುವತಿಯರು ಕಲರ್ ಫುಲ್ ದಾಂಡಿಯಾ ಉತ್ಸವವನ್ನು ಸಂಭ್ರಮಿಸುತ್ತಾರೆ.
ಒಟ್ಟಾರೆಯಾಗಿ ಎರಡು ವರ್ಷ ಕೋವಿಡ್ ಹಿನ್ನೆಲೆ ಬ್ರೇಕ್ ಬಿದ್ದಿದ್ದ ದಸರಾ ಉತ್ಸವ ಬೆಳಗಾವಿಯಲ್ಲಿ ಜೋರಾಗಿತ್ತು.
PublicNext
06/10/2022 09:10 am