ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕೈಯಲ್ಲಿ ತಲವಾರ್ ಹಿಡಿದು "ದುರ್ಗಾ ದೌಡ್‌"ದಲ್ಲಿ ಕುಣಿದ ಯುವಕರು

ಹುಕ್ಕೇರಿ: ದುರ್ಗಾಮಾತಾ ದೌಡ್ ಹಿನ್ನಲೆ ಕೈಯಲ್ಳಿ ತಲವಾರ್ ಹಿಡಿದು ಯುವಕರು ನೃತ್ಯ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ನವರಾತ್ರಿ ನಿಮಿತ್ತ ಹಿಂದೂಪರ ಸಂಘಟನೆ ಯುವಕರಿಂದ ದುರ್ಗಾಮಾತಾ ದೌಡ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಯುವಕರು ತಲವಾರ ಪ್ರದರ್ಶನ (ಖಡ್ಗ) ಮಾಡಿದ್ದಾರೆ. ಪಟ್ಟಣದ ಹಳ್ಳದಕೇರಿ ತುರಮುಂದಿ ಬಳಿ ಪ್ರತಿಷ್ಟಾಪಿಸಿರುವ ದುರ್ಗಾದೇವಿ ಮೂತಿಯ ಎದುರು ಯುವಕರು ಡಾಲ್ಬಿ ಹಚ್ಚಿ ಕೈಯಲ್ಲಿ ತಲವಾರ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ.

ಆದರೆ ಇದೀಗ ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನಾನಾ ರೀತಿಯ ಚರ್ಚೆಗಳಿಗೆ ಗ್ರಾಸವಾಗಿದ್ದು, ಈ ನಡೆಯನ್ನು ಪ್ರಜ್ಞಾವಂತರು ಕೂಡಾ ಈ ನಡೆಗೆ ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಹುಕ್ಕೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Shivu K
PublicNext

PublicNext

03/10/2022 08:27 am

Cinque Terre

26.65 K

Cinque Terre

3

ಸಂಬಂಧಿತ ಸುದ್ದಿ