ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ 67ನೇ ಕಬ್ಬು ನುರಿಸುವ ಕಾರ್ಯಕ್ಕೆ ಶಿವಲಿಂಗೇಶ್ವರ ಸ್ವಾಮೀಜಿ ಚಾಲನೆ

ಹುಕ್ಕೇರಿ: ಸುಮಾರು 7 ದಶಕಗಳ ಹಿಂದೆ ರೈತರ ಬದುಕು ಕಟ್ಟಿಸಿಕೊಡುವ ನಿಟ್ಟಿನಲ್ಲಿ ದೇಶದಲ್ಲಿ ಪ್ರಥಮವಾಗಿ ಕಾರ್ಖಾನೆಗಳ ಪ್ರಾರಂಭೋತ್ಸವ ಹಂತದಲ್ಲಿ ದಿ.ಅಪ್ಪಣಗೌಡ ಪಾಟೀಲರು ನೇತೃತ್ವದಲ್ಲಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯು ಸ್ಥಾಪನೆಯಾಯಿತು. ಇದು ರೈತರ ಬಾಳಿಗೆ ವರದಾನವಾಗಿರುವುದು ನಮ್ಮೆಲರ ಭಾಗ್ಯ ಎಂದು ನಿಡಸೋಸಿಯ ಸಿದ್ಧ ಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ.

ಮಂಗಳವಾರ ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ 67ನೇ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ರೈತರು ಬದುಕಲು ಪ್ರಾರಂಭಗೊಂಡ ಕಾರ್ಖಾನೆಯ ವ್ಯವಸ್ಥೆ ಇಂದು ದೇಶದಲ್ಲಿ ಸಕ್ಕರೆ ಕಾರ್ಖಾನೆಗಳು ಕೈಗಾರಿಕೆಗಳಾಗಿ ಹೆಜ್ಜೆ ಇಟ್ಟಿವೆಂದರು. ನಮಗಾಗಿಯೆ ಆರ್ಥಿಕ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಸ್ಥಾಪನೆಗೊಂಡಿವ ಕಾರ್ಖಾನೆಗೆ ರೈತರೆ ಜೀವಾಳ. ಉಳಿಸಿ ಬೆಳೆಸುವದು ಎಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ ಎಂದರು.

ಮಾಜಿ ಸಂಸದರು ಹಾಗೂ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ, ಚೇರಮನ್ ನಿಖಿಲ್ ಕತ್ತಿ, ಉಪಾಧ್ಯಕ್ಷ ಶ್ರೀಶೈಲಪ್ಪ ಮಗದುಮ್ಮ ಸುರೇಶ ಬೆಲ್ಲದ, ಬಸವರಾಜ ಕಲ್ಲಟ್ಟಿ, ಪ್ರಭುದೇವ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಬಸಪ್ಪ ಮರಡಿ, ಸುರೇಂದ್ರ ದೊಡ್ಡಲಿಂಗನವರ, ಶಿವಪುತ್ರ ಶಿರಕೋಳಿ, ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಮಾಜಿ ಜಿ.ಪಂ ಸದಸ್ಯ ಪವನ ಕತ್ತಿ, ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಸತ್ಯೆಪ್ಪಾ ಮತ್ತು ಜಯಸಿಂಗ ಸನದಿ ಮತ್ತಿತರರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

12/10/2022 10:28 am

Cinque Terre

10.42 K

Cinque Terre

0

ಸಂಬಂಧಿತ ಸುದ್ದಿ