ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿಗರೇ ಗಮನಿಸಿ: ನಾಳೆ (ಮೇ 9)ರಂದು ನಗರದ ಈ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಉತ್ತರ ಭಾಗದಲ್ಲಿ ಸೋಮವಾರ ನೀರು ವ್ಯತ್ಯಯ ಆಗಲಿದೆ.

ಕಾವೇರಿ 1& 2 ಹಂತದ ನೀರು ಸರಬರಾಜು ಯೋಜನೆ ಪರ್ಯಾಯವಾಗಿ ನಿರ್ಮಿಸಿರುವ 300 ಎಂಎಲ್ ಡಿ ಜಲಶುದ್ಧೀಕರಣ ಘಟಕದ ಕಾಮಗಾರಿಗಾಗಿ ಗುರುತ್ವಾಕರ್ಷ ಣೆಯ ಮುಖ್ಯ ಕೊಳವೆ ಮಾರ್ಗದ y- joint ಬಳಿ ನೀರಿನ ಸೋರಿಕೆ ತಡೆಗಟ್ಟಲು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಸಂಬಂಧ ನಾಳೆ ಬೆಳಗ್ಗೆ 3 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನೀರಿನ ವ್ಯತ್ಯಯ ಆಗಲಿದೆ.

ಗಾಂಧಿ ನಗರ, ಕುಮಾರ ಪಾರ್ಕ್ ಪೂರ್ವ, ವಸಂತ ನಗರ, ಹೈಗ್ರೌಂಡ್ಸ್ , ಸಂಪಂಗಿ ರಾಮನಗರ , ಸಿಕೆಸಿ ಗಾರ್ಡನ್, ಕೆಎಸ್ ಗಾರ್ಡನ್ , ಟೌನ್ ಹಾಲ್, ಲಾಲ್ ಬಾಗ್ ರೋಡ, ಧರ್ಮರಾಯಸ್ವಾಮಿ ವಾರ್ಡ್ ಚಿಕ್ಕಪೇಟೆ, ಕುಂಬಾರ ಪೇಟೆ, ನಗರ ಪೇಟೆ, ಕಾಟನ್ ಪೇಟೆ, ಕಬ್ಬನ್ ಪೇಟೆ, ಭಾರತೀ ನಗರ, ಸದಾಶಿವ ನಗರ , ನಾಗಾವರ, ಜೆ.ಸಿ.ನಗರ ಪಿಳ್ಳನ್ ಗಾರ್ಡನ್, ಹಡ್ಸನಗ ರಸ್ತೆ, ಕಾಕ್ಸನ್‌ಟೌನ್, ಸೇರಿದಂತೆ ಹಲವು ಏರಿಯಾಗಳಲ್ಲಿ ನಾಳೆ ನೀರು ವ್ಯತ್ಯಯ ಆಗಲಿದೆ.

Edited By : Vijay Kumar
Kshetra Samachara

Kshetra Samachara

08/05/2022 02:50 pm

Cinque Terre

2.68 K

Cinque Terre

0