ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಬನಶಂಕರಿ, ವೈಟ್​ಫೀಲ್ಡ್​, ಯಶವಂತಪುರ ಸೇರಿ ಹಲವೆಡೆ ಇಂದು ಕರೆಂಟ್ ಇರಲ್ಲ

ಬೆಂಗಳೂರು: ಬೆಂಗಳೂರಿನ ಹಲವು ಏರಿಯಾಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಇಂದು ಮತ್ತು ನಾಳೆ (ಫೆ. 6) ಪವರ್ ಕಟ್ ಇರಲಿದೆ. ಇನ್ನೆರಡು ದಿನ ಬೆಂಗಳೂರಿನಾದ್ಯಂತ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರಿನ ಜಯನಗರ, ಇಸ್ರೋ ಲೇಔಟ್, ಬನಶಂಕರಿ, ಕತ್ರಿಗುಪ್ಪೆ, ಎಲೆಕ್ಟ್ರಾನಿಕ್ ಸಿಟಿ, ಯಶವಂತಪುರ, ವೈಟ್‌ಫೀಲ್ಡ್ ಏರಿಯಾಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ.

ದಕ್ಷಿಣ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕೆಆರ್ ರಸ್ತೆ, ಜಯನಗರ 8ನೇ ಬ್ಲಾಕ್, ವಿನಾಯಕನಗರ, ಟೌನ್ ಹಾಲ್, ರವೀಂದ್ರ ಕಲಾಕ್ಷೇತ್ರ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಜೆಪಿ ನಗರ 1ನೇ ಹಂತ, ಸಾರಕ್ಕಿ ಮಾರುಕಟ್ಟೆ, ತ್ಯಾಗರಾಜನಗರ ಮುಖ್ಯರಸ್ತೆ, ಪಾಪಯ್ಯ ಗಾರ್ಡನ್, ಬನಶಂಕರಿ 3ನೇ ಬಡಾವಣೆ, ಬನಶಂಕರಿ 3ನೇ ಬ್ಲಾಕ್ ಪೀಡಿತ ಪ್ರದೇಶಗಳು. ಅಚ್ಚುಕಟ್ಟು, ಕತ್ರಿಗುಪ್ಪೆ, ಕಾಕತಿಯನಗರ, ಮಾರತಹಳ್ಳಿ, ಹೊಂಗಸಂದ್ರ, ಬೊಮ್ಮನಹಳ್ಳಿ, ಸಂತೃಪ್ತಿ ನಗರ, ನೃಪತುಂಗನನಗರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ ಮತ್ತು ದೊಡ್ಡತೋಗೂರಿನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.

Edited By : PublicNext Desk
Kshetra Samachara

Kshetra Samachara

05/02/2022 10:44 am

Cinque Terre

400

Cinque Terre

0