ಚಿಕ್ಕಬಳ್ಳಾಪುರ: ಭಾರೀಮಳೆಗೆ ಚಿಕ್ಕಬಳ್ಳಾಪುರದ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಎರಡು ಕಡೆ ಭೂ ಕುಸಿತ ಉಂಟಾಗಿದೆ. ನಂದಿಬೆಟ್ಟದ ಬುಡದ ಸುಲ್ತಾನಪೇಟೆ ಗ್ರಾಮದ ಎರಡು ಕಡೆ ಭೂಕುಸಿತವಾಗಿದೆ. ಸುಲ್ತಾನಪೇಟೆಯಿಂದ ನಂದಿಬೆಟ್ಟಕ್ಕೆ ತೆರಳುವ ಮೆಟ್ಟಿಲು ಮಾರ್ಗದ ವೀರಭದ್ರಸ್ವಾಮಿ ದೇಗುಲದ ಭಾಗದಲ್ಲಿ ಭೂಕುಸಿದಿದೆ. ಇನ್ನೂ ಇದೇ ಸುಲ್ತಾನಪೇಟೆ ಗ್ರಾಮದ ಕಡೆ ಮತ್ತೊಂದು ಭಾಗದಲ್ಲಿ ಭೂಮಿ ಕುಸಿದಿದೆ. ಬೃಹತ್ ಗಾತ್ರದ ಕಲ್ಲು ಬಂಡೆ ಮರ ಮಣ್ಣು ಸಮೇತ ಕೊಚ್ಚಿಕೊಂಡು ಬಂದಿವೆ.. ಭೂ ಕುಸಿತ ಆಗಿರೋ ಜಾಗದಲ್ಲಿ ಜಲಪಾತ ಝರಿಯಂತೆ ನೀರು ಧುಮ್ಮಿಕ್ಕುತ್ತಿದೆ.
ಇನ್ನೂ ಕಳೆದ ವರ್ಷವೂ ಸಹ ಭಾರೀ ಮಳೆಗೆ ನಂದಿಬೆಟ್ಟದಲ್ಲಿ ಭೂಕುಸಿತ ಆಗಿ ಮೂರು ತಿಂಗಳ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಈ ಬಾರಿಯೂ ಸಹ ಭಾರೀ ಮಳೆಯಿಂದ ಭೂ ಕುಸಿತ ಆಗಿದೆ. ರಸ್ತೆ ಮಾರ್ಗದಲ್ಲಿ ಯಾವುದೇ ಭೂ ಕುಸಿತ ಆಗಿಲ್ಲ.ಹೀಗಾಗಿ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಸುಲ್ತಾನಪೇಟೆ ಗ್ರಾಮದ ಕಡೆ ಭೂಕುಸಿತ ಆಗಿರೋದ್ರಿಂದ ಬೆಟ್ಟದಿಂದ ಹರಿದು ಬರ್ತಿರೋ ನೀರು ಬೆಟ್ಟದ ಕೆಳಭಾಗದ ಜಮೀನುಗಳಿಗೆ ನುಗ್ಗಿದೆ. ಗ್ರಾಮಸ್ಥರಿಗೂ ಸಹ ಬಂಡೆಗಳು ಉರುಳಿ ಬರುವ ಆತಂಕ ಕಾಡುತ್ತಿದೆ.
Kshetra Samachara
06/09/2022 11:12 pm