ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ಕೆ.ಇ.ಬಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಹಾಗೂ ಸರ್ಜಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಉಂಟಾಗಿರುವ ವಿದ್ಯುತ್ ಸಮಸ್ಯೆಯನ್ನು ಖಂಡಿಸಿ ಇಂದು ಸರ್ಜಾಪುರ ಸಿಟಿಜನ್ಸ್ ಪೋರಂ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ರಾಜ್ ಗೋಪಾಲ್ ಕಲ್ಯಾಣ ಮಂಟಪ ದಿಂದ ಕೆ.ಇ.ಬಿ ಕಚೇರಿ ವರೆಗೆ ಕಾಲ್ನಡಿಗೆ ಜಾಥ ನಡೆಸಿ ನಂತರ ಕೆ.ಇ.ಬಿ ಕಚೇರಿ ಆವರಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಇನ್ನು ಇದೇ ಸಂಧರ್ಭದಲ್ಲಿ ಪ್ರತಿಭಟನಾಕಾರರು ಕೆ.ಇ.ಬಿ. ಇಲಾಖೆಯ ಅಧಿಕಾರಿಗಳ ವಿರುದ್ದ ಧಿಕ್ಕಾರಗಳನ್ನು ಕೂಗಿ ತಮ್ಮ ಆಕ್ರೋಶ ವನ್ನು ವ್ಯಕ್ತ ಪಡಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಸರ್ಜಾಪುರ ಸಿಟಿಜನ್ಸ್ ಪೋರಂ ನ ಅಧ್ಯಕ್ಷ ಸರ್ಜಾಪುರ ಭರತ್ , ಸರ್ಜಾಪುರ ಗ್ರಾಮಪಂಚಾಯಿತಿ ಸದಸ್ಯರಾದ ಕಲಾವತಿ, ಚಿನ್ನು ರಾಮಸ್ವಾಮಿ, ಗಾಯಿತ್ರಿ, ಶ್ರೀನಿವಾಸ್, ಮಾಜಿ ಸದಸ್ಯ ಜಗದೀಶ್, ರೈತ ಮುಖಂಡರಾದ ಗೋಪಾಲ್ ರೆಡ್ಡಿ, ಸರ್ಜಾಪುರ ಸಿಟಿಜನ್ಸ್ ಪೋರಂ ನ ಮನೋಜ್, ಮನೀಶ್,ಭಾಗಿಯಾಗಿದ್ದರು
Kshetra Samachara
25/06/2022 05:09 pm