ಬೆಂಗಳೂರು: ಎಲ್ಲಾ ಕಲೆ & ಕ್ರೀಡೆಗಳ ಮೂಲ ಭಾರತದ ಯೋಗ ಅಂತಾರೆ. ವಿಶ್ವವನ್ನಾಳಬೇಕಿದ್ದ ಯೋಗ ಇತ್ತೀಚೆಗೆ ಹೆಚ್ಚು ಪ್ರವರ್ಧಮಾನಕ್ಕೆ ಬರ್ತಿರೋದು ಭಾರತೀಯರ ಹೆಮ್ಮೆ. ಇಂತಹ ನಮ್ಮ ಹೆಮ್ಮೆಯ ಯೋಗ ಬೆಂಗಳೂರಿನ ಯಲಹಂಕದಲ್ಲಿ ವಿಶ್ವ ದಾಖಲೆಗೆ ಸಾಕ್ಷಿಯಾಗಿದೆ. ಹಾಗಾದರೆ ಯಾವುದಾ ವಿಶ್ವ ದಾಖಲೆ ಅಂತೀರಾ..!? ಇಲ್ಲಿದೆ ನೋಡಿ ಡೀಟೈಲ್ಸ್..
ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ತರಹುಣಸೆ ಬಳಿಯ ಪಡುಕೋಣೆ & ದ್ರಾವಿಡ್ ಸ್ಪೋರ್ಟ್ಸ್ ಅಕಾಡೆಮಿ ಸೆಂಟರ್ ನಲ್ಲಿಂದು ಅಕ್ಷರ ಯೋಗ ವತಿಯಿಂದ ವಿಶ್ವದಾಖಲೆ ಸೃಷ್ಟಿಯಾಗಿದೆ. ಅಕ್ಷರ ಯೋಗ ಕೇಂದ್ರದ 250 ಜನ ನುರಿತ ಯೋಗಪಟುಗಳು ಏಕಕಾಲದಲ್ಲಿ ಎರಡು ನಿಮಿಷ ಧನುರಾಸನ (ಬಿಲ್ ಬೋ) ಮಾಡಿ ಗಿನ್ನಿಸ್ ದಾಖಲೆ ಪುಟ ಸೇರಿದ್ದಾರೆ. ಎಲ್ಲಾ ವಯೋಮಾನದ ಯುವಕ ಯುವತಿಯರು, ಪುರುಷ ಮಹಿಳೆಯರು ಮಕ್ಕಳ ಜೊತೆಗೆ 10 ಜನ ವಿಶೇಷ ಚೇತನ ಮಕ್ಕಳ ಯೋಗದ ಧನುರಾಸನ ಗಿನ್ನಿಸ್ ಪುಟದಲ್ಲಿ ಬೆಂಗಳೂರಿನ ಹೆಸರನ್ನು ಅಜರಾಮರಗೊಳಿಸಿದೆ.
ಅಕ್ಷರ ಯೋಗದ ವತಿಯಿಂದ ಬೆಂಗಳೂರಿನಲ್ಲಿ ಯೋಗ ಹಬ್ಬ ನಡೆಯುತ್ತಿದೆ. ಹಿಮಾಲಯ ಯೋಗ ಆಶ್ರಮ, ವಿಶ್ವ ಯೋಗ ಸಂಸ್ಥೆ, ಇಂಟರ್ನ್ಯಾಷನಲ್ ಸಿದ್ದ ಫೌಂಡೇಶನ್ ಸಂಸ್ಥೆಗಳ ನೂರಾರು ಜನ ದೇಶ, ವಿದೇಶ & ಹೊರರಾಜ್ಯಗಳ ಯೋಗಪಟುಗಳು ಯೋಗ ಹಬ್ಬದಲ್ಲಿ ಭಾಗಿಯಾಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಬೆಂಗಳೂರಿನಲ್ಲಿ ಅಕ್ಷರ ಯೋಗ ವತಿಯಿಂದ ಗಿನ್ನಿಸ್ ದಾಖಲೆ ಸೃಷ್ಟಿ ಯಾಗಿದ್ದು, ಇದರಲ್ಲಿ ನಾವು ಭಾಗಿಯಾಗಿದ್ದು ತುಂಬಾ ಖುಷಿ ನೀಡಿದೆ ಅಂತಾರೆ ಯೋಗಪಟುಗಳು.
ಯೋಗದಲ್ಲಿ ಗಿನ್ನೀಸ್ ವರ್ಲ್ ರೆಕಾರ್ಡ್ಸ್ ದಾಖಲಾಗಿದೆ ಅಂದರೆ ಅದು ಸುಲಭವಲ್ಲ. ಅದರಲ್ಲೂ 250 ಜನ ದಾಖಲೆಯಲ್ಲಿ ಭಾಗಿಯಾಗಿದ್ದು ನಿಜಕ್ಕೂ ವಿಶೇಷ. ಸತತ ಒಂದು ತಿಂಗಳ ಅಭ್ಯಾಸ, ಮಿತ ಆಹಾರ ಜೊತೆ ದೀಕ್ಷೆ ರೀತಿ ಧನುರಾಸನ ವಿಶ್ವದಾಖಲೆಗೆ ಭಾಜನವಾಗಿದೆ. ಈ ವಿಶ್ವದಾಖಲೆ ಬೆಂಗಳೂರಿಗೆ & ಯೋಗದ ತವರು ಭಾರತ ದೇಶಕ್ಕೂ ಹೆಮ್ಮೆ..
PublicNext
28/08/2022 01:18 pm