ಬೆಂಗಳೂರು: ಗಾರ್ಡನ್ ಸಿಟಿ ಬೆಂಗಳೂರು ನೋಡಲು ಇಚ್ಚಿಸುವ ಕ್ರೀಡಾಪಟು ಹಾಗೂ ಅವರ ಸಂಗಡಿಗರಿಗೆ ಬಿಎಂಟಿಸಿ ವಿಶೇಷ
ಬೆಂಗಳೂರು ದರ್ಶಿನಿ ಬಸ್ ವ್ಯವಸ್ಥೆ ಮಾಡಿದೆ.
ರಾಷ್ಟ್ರೀಯ ಕ್ರೀಡಾಕೂಟವಾದ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ 2021 ಇದೇ 24-4-2022 ರಿಂದ 3-5 22 ರವರೆಗೆ
ಬೆಂಗಳೂರುಲ್ಲಿ ಜರುಗುತ್ತಿದೆ.ಇಲ್ಲಿ ಭಾಗಿಯಾಗುತ್ತಿರುವ ಕ್ರೀಡಾಪಟುಗಳಿಗೆ ಬೆಂಗಳೂರು ದರ್ಶನ ಮಾಡಿಸಲು ಬಿಎಂಟಿಸಿ ಹೊರಟಿದೆ.
ದರ್ಶಿನಿ -1 ಬಸ್ ಬೆಳಗ್ಗೆ 9 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಟು ಇಸ್ಕಾನ್ ಟೆಂಪಲ್, ವಿಧಾನ ಸೌಧ, ಗವಿಗಂಗಾಧರ ದೇವಸ್ಥಾನ ಬಸವನಗುಡಿ, ಲಾಲ್ ಬಾಗ್, ಕಬ್ಬನ್ ಪಾರ್ಕ್, ಸರ್ ಎಂ ವಿಶ್ವೇಶ್ವರಯ್ಯ ಮ್ಯೂಸಿಯಂ ಸಂಜೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ವಾಪಸ್ ಆಗಲಿದೆ.
ದರ್ಶಿನಿ- 2 ಬಸ್ ಆರ್ಟ್ ಆಫ್ ಲೀವಿಂಗ್ ಆಶ್ರಮ ಕನಕಪುರ ರಸ್ತೆ ಬೆಳಗ್ಗೆ 8.40 ಗಂಟೆಗೆ ಹೊರಟು ಗವಿಗಂಗಾಧರೇಶ್ವರ ದೇವಸ್ಥಾನ,ದೊಡ್ಡ ಗಣಪತಿ ದೇವಸ್ಥಾನ, ಇಸ್ಕಾನ್ ಟೆಂಪಲ್, ವಿಧಾನ ಸೌಧ , ಲಾಲ್ ಬಾಗ್ , ಸರ್ ಎಂ ವಿಶ್ವೇಶ್ವರಯ್ಯ ಮ್ಯೂಸಿಯಂ ಮುಗಿಸಿ ಆರ್ಟ್ ಆಫ್ ಲೀವಿಂಗ್ ಆಶ್ರಮ ವಾಪಸ್ ಬಸ್ ಬರಲಿದೆ.
ದರ್ಶಿನಿ -3 ಬಸ್ ಜೈನ್ ಕಾಲೇಜ್ ಕ್ಯಾಂಪಸ್ ಕನಕಪುರ ರಸ್ತೆ ಬೆಳಗ್ಗೆ 8.30 ಕ್ಕೆ ಹೊರಡುವ ಬಸ್ ಗವಿಗಂಗಾಧರೇಶ್ವರ ದೇವಸ್ಥಾನ,ದೊಡ್ಡ ಗಣಪತಿ ದೇವಸ್ಥಾನ, ಇಸ್ಕಾನ್ ಟೆಂಪಲ್, ವಿಧಾನ ಸೌಧ , ಲಾಲ್ ಬಾಗ್ , ಸರ್ ಎಂ ವಿಶ್ವೇಶ್ವರಯ್ಯ ಮ್ಯೂಸಿಯಂ ಮುಗಿಸಿ ಜೈನ್ ಕಾಲೇಜ್ ಕ್ಯಾಂಪಸ್ ಬಸ್ ವಾಪಸ್ ಆಗಲಿದೆ.
Kshetra Samachara
23/04/2022 06:34 pm