ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಕ್ರೋ ಲ್ಯಾಬ್ಸ್‌ ಅವರಿಂದ ಕಾಡುವ ಜ್ವರದ ನಿರ್ವಹಣೆಯ ಕುರಿತು ಫೀವರ್ ಫೌಂಡೇಶನ್ ಸಮ್ಮೇಳನ..!

ಬೆಂಗಳೂರು: ಮೈಕ್ರೋ ಲ್ಯಾಬ್ಸ್, ಫೀವರ್ ಫೌಂಡೇಶನ್ ಕಾನ್ಫರೆನ್ಸ್ (FeFCon) ಜೊತೆ ಸೇರಿ ನವೆಂಬರ್ 4 ಹಾಗೂ 5 ರಂದು ಕಾಡುವ ಜ್ವರವನ್ನು ಯಾವ ರೀತಿ ಪರಿಣಾಮಕಾರಿಯಾಗಿ ಎದುರಿಸಬಹುದು ಎಂಬುದರ ಕುರಿತು ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸಿದೆ *ಮೈಕ್ರೋ ಲ್ಯಾಬ್ಸ್‌ನ ಸೀನಿಯರ್‌ ವೈಸ್‌ ಪ್ರೆಸಿಡೆಂಟ್‌ ಹಾಗೂ ಫಿವರ್ ಫೌಂಡೇಶನ್ ಸಂಚಾಲಕರಾದ ಡಾ. ಮಂಜುಳಾ ಸುರೇಶ್ ತಿಳಿಸಿದರು.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜ್ವರ ನಿರ್ವಹಣೆ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಈ ಹಿಂದೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ ಫೀವರ್ ಫೌಂಡೇಶನ್ ಕಾನ್ಫರೆನ್ಸ್ ಹಿಂದಿನ ಆವೃತ್ತಿಯಲ್ಲಿ 30,000 ಕ್ಕೂ ಹೆಚ್ಚು ವೈದ್ಯರನ್ನು ಸೇರಿಸಿ ಜ್ವರದ ನಿರ್ವಹಣೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಇದು ಫೀವರ್ ಫೌಂಡೇಶನ್ ಕಾನ್ಫರೆನ್ಸ್ ಅವರ ಐದನೇ ಆವೃತ್ತಿಯಾಗಿದ್ದು ಜ್ವರದ ನಿರ್ವಹಣೆಯಲ್ಲಿ ತಮ್ಮ ಅನುಭವ ಹಾಗೂ ಪರಿಣತಿಯನ್ನು ವೈದ್ಯರು, ಮಕ್ಕಳ ವೈದ್ಯರು, ಇತರ ವೈದ್ಯಕೀಯ ತಜ್ಞರು ಈ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಿದ್ದಾರೆ ಎಂದರು.

ಮೈಕ್ರೋ ಲ್ಯಾಬ್ಸ್ ನ ವೈಸ್ ಪ್ರೆಸಿಡೆಂಟ್ ಮಾರ್ಕೆಟಿಂಗ್ ಜಯರಾಜ್ ಮಾತನಾಡಿ, ಈ ಸಮ್ಮೇಳನದ ಆರಂಭದಲ್ಲಿ ಭಾರತದಾದ್ಯಂತ ಮೆಡಿಸಿನ್ ಮತ್ತು ಪೀಡಿಯಾಟ್ರಿಕ್ಸ್ನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರಮಟ್ಟದ ವೈಜ್ಞಾನಿಕ ಪೋಸ್ಟರ್ ಮತ್ತು ರಸಪ್ರಶ್ನೆ ಸ್ಪರ್ಧೆಯು ನಡೆಯಲಿದೆ. ಕಳೆದ ವಾರ ವಲಯ ಮಟ್ಟದ ರಸಪ್ರಶ್ನೆ ಸುತ್ತುಗಳಲ್ಲಿ 1400 ಕ್ಕೂ ಹೆಚ್ಚು ವೈದ್ಯಕೀಯ ಪದವಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ನವೆಂಬರ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ಗ್ರ್ಯಾಂಡ್ ಫಿನಾಲೆಯಲ್ಲಿ ನಾಲ್ಕು ವಲಯಗಳ ಫೈನಲಿಸ್ಟ್‌ಗಳು ಸ್ಪರ್ಧಿಸಲಿದ್ದಾರೆ.

ಮೈಕ್ರೋ ಲ್ಯಾಬ್ಸ್ ಫೀವರ್ ಫೌಂಡೇಶನ್ ಮೂಲಕ ಜ್ವರ ನಿರ್ವಹಣೆಯ ಕುರಿತು ಸಂಶೋಧನೆ, ಶಿಕ್ಷಣ, ಹಾಗೂ ಚಿಕಿತ್ಸೆಯ ಮಾಹಿತಿಯನ್ನು ಒದಗಿಸುತ್ತಿದೆ. ಆರೋಗ್ಯ ವೃತ್ತಿಪರರಿಗೆ ಪುರಾವೆ ಆಧರಿತ ನವೀಕರಣಗಳನ್ನು ಒದಗಿಸುವ ಸುಸ್ಥಿರ ವಿಜ್ಞಾನ-ಚಾಲಿತ ಕಾರ್ಯಕ್ರಮವನ್ನು ನಡೆಸಲು ಈ ಫೌಂಡೇಶನ್ ಬದ್ಧವಾಗಿದೆ. ಹಾಗೇ ಜ್ವರ ನಿರ್ವಹಣೆ ಕುರಿತು ವೈದ್ಯರು ಹಾಗೂ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಈ ಹಿಂದೆ ಹಲವು ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ ಎಂದರು.

ಈ ಸಮ್ಮೇಳನದ ಮೂಲಕ ವೈದ್ಯರಿಗೆ ರೋಗಿಗಳನ್ನು ಕಾಡುವ ಜ್ವರವನ್ನು ಸರಿಯಾದ ವಿಧಾನದಲ್ಲಿ ನಿರ್ವಹಿಸಲು ಸಹಾಯವಾಗಲಿದೆ.ಹಾಗೇ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಜ್ವರವನ್ನು ನಿರ್ವಹಣೆ ಮಾಡುವುದರ ಕುರಿತು ಮಾಹಿತಿಯನ್ನು ಒದಗಿಸಲಿದ್ದಾರೆ ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

26/09/2022 06:24 pm

Cinque Terre

1.11 K

Cinque Terre

0

ಸಂಬಂಧಿತ ಸುದ್ದಿ