ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರುನಾಡಿನಲ್ಲಿ ಹುಟ್ಟುವುದಕ್ಕೆ ಏಳು ಜನ್ಮ‌ ಪುಣ್ಯಾ ಮಾಡಿರಬೇಕು: ಗುರುಕಿರಣ್..!

ಬೆಂಗಳೂರು: ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡಿನಲ್ಲಿ 75ನೇ ಸ್ವಾತಂತ್ರ್ಯ ಮಹೋತ್ಸವ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ಜಾಥ, 20000ತ್ರಿವರ್ಣ ಧ್ವಜ ವಿತರಣೆ ಮಾಡಲಾಯಿತು. ಸಂಗೀತ ನಿರ್ದೇಶಕ, ನಟ ಗುರುಕಿರಣ್ ಮತ್ತು ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಚಾಲನೆ ನೀಡಿದರು.

ಸಂಗೀತ ನಿರ್ದೇಶಕ ಗುರುಕಿರಣ್ ರವರು ಮಾತನಾಡಿ ಭಾರತ ಪುಣ್ಯ ಭೂಮಿ ಅದರಲ್ಲು ಕರುನಾಡಿನಲ್ಲಿ ಹುಟ್ಟುವುದು ಏಳು ಜನ್ಮ ಪುಣ್ಯ ಪಡೆದಿರಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವ ದೇಶ,ವಿದೇಶಗಳಲ್ಲಿಯೂ ಸಹ ಅದ್ದೂರಿಯಾಗಿ ಅಚರಿಸಲಾಗುತ್ತಿದೆ. ಭಾರತಮಾತೆ ಎಂದು ಗೌರವದಿಂದ ಕಾಣುವ ದೇಶ ನಮ್ಮದು. ದೇಶ,ನಾಡು,ನುಡಿಯ ಬಗ್ಗೆ ಅಭಿಮಾನ ಎಲ್ಲರಿಗೂ ಇರಬೇಕು ಎಂದು ಹೇಳಿದರು. 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟ ಮಹತ್ವ ಸಂದೇಶಗಳನ್ನು ಸಹ ಮನೆ,ಮನೆಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

13/08/2022 08:19 pm

Cinque Terre

1.04 K

Cinque Terre

0

ಸಂಬಂಧಿತ ಸುದ್ದಿ