ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಭಾರಿ ಮಳೆಗೆ ಕುಸಿದ ಎಪಿಎಂಸಿ ಮಾರುಕಟ್ಟೆಯ ಕಾಂಪೌಂಡ್

ದೊಡ್ಡಬಳ್ಳಾಪುರ: ನಗರದಲ್ಲಿ‌ ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಗೆ ಎಪಿಎಂಸಿ ಹಿಂದಿನ ಕಾಂಪೌಂಡ್ ಗೋಡೆ ಕುಸಿದಿದೆ.

ಕಳೆದೊಂದು ವಾರದಿಂದ ಸುರಿದ ಮಳೆಯಿಂದ ಕಾಂಪೌಂಡ್ ಪಕ್ಕದ ಚರಂಡಿ‌ ಹಾಗೂ ಎಪಿಎಂಸಿ ಒಳಗಿನ ಖಾಲಿ ಜಾಗದಲ್ಲಿ ಮಳೆ‌ ನೀರು ತುಂಬಿತ್ತು. ಇದರಿಂದ ಗೋಡೆ ನೆನೆದು ದಿಢೀರ್ ಕುಸಿದು ಬಿದ್ದಿದೆ.ಕಾಂಪೌಂಡ್‌ ಗೋಡೆಯೊಂದಿಗೆ ಅಡಿಪಾಯದ ಕಲ್ಲುಗಳೂ ಕೂಡ ಕಿತ್ತುಬಂದಿವೆ. ಸುಮಾರು ಇನ್ನೂರು ಮೀಟರ್ ನಷ್ಟು ಗೋಡೆ ಕುಸಿದಿದೆ. ಮುಂದುವರಿದ ಗೋಡೆಯಲ್ಲೂ ಬಿರುಕು ಬಿಟ್ಟಿದೆ. ಗೋಡೆ ಬಿದ್ದ ರಭಸಕ್ಕೆ ವಿದ್ಯುತ್ ಕಂಬವೂ ವಾಲಿದೆ. ಇನ್ನಷ್ಟು ಬಿರುಕು ಬಿಟ್ಟಿರುವ ಗೋಡೆ ಯಾವ ಕ್ಷಣದಲ್ಲಾದರೂ ಬೀಳುವ ಭೀತಿ ಎದುರಾಗಿದೆ.

ಕಾಂಪೌಂಡ್ ಹಿಂದೆಯೇ ಸುಭಾಷ್ ನಗರದ ಮುಖ್ಯರಸ್ತೆ ಹಾದು ಹೋಗಿದ್ದು, ಸ್ಥಳೀಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಓಡಾಡುತ್ತಾರೆ. ಬಿರುಕು ಬಿಟ್ಟಿರುವ ಗೋಡೆ ಅಪಾಯದ ಅಂಚಿನಲ್ಲಿದ್ದು ಕೂಡಲೇ ತೆರವು ಮಾಡಬೇಕು ಎಂದು ಸ್ಥಳೀಯರಾದ ಶ್ರೀನಿವಾಸ್, ರಮೇಶ್ ಒತ್ತಾಯಿಸಿದರು. ಕಾಂಪೌಂಡ್ ಕಾಮಗಾರಿ‌ ಕಳಪೆ ಗುಣಮಟ್ಟದಿಂದ ಕೂಡಿರುವುದೇ ಘಟನೆಗೆ ಕಾರಣ ಎಂದು ದೂರಿದ್ದಾರೆ.

Edited By : PublicNext Desk
Kshetra Samachara

Kshetra Samachara

23/05/2022 08:42 am

Cinque Terre

2.58 K

Cinque Terre

0

ಸಂಬಂಧಿತ ಸುದ್ದಿ