ರಿಪೋರ್ಟ್- ರಂಜಿತಾಸುನಿಲ್
ವಿಧಾನಸೌಧ : ಜೂನ್ 23ರಂದು ಪ್ರಕಟಿಸಲಾದ ಬಿಬಿಎಂಪಿ ವಾರ್ಡ್ ಗಳ ಮರುವಿಂಗಡಣಾ ಕರಡು ಪಟ್ಟಿ ಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಅವಕಾಶ ನೀಡಲಾಗಿತ್ತು. ನಿನ್ನೆ ಸಂಜೆ 5 ಗಂಟೆಗೆ ಈ ಆಕ್ಷೇಪಣೆ ಸಲ್ಲಿಕೆ ಅವಧಿ ಮುಕ್ತಾಯವಾಗಿದ್ದು ಇಂದು ಆಕ್ಷೇಪಣೆಗಳ ಕ್ರೋಢೀಕರಣ ಕಾರ್ಯವು ವಿಕಾಸ ಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ನಡೆಯುತ್ತಿದೆ.
ಸುಮಾರು 2,500ಕ್ಕೂ ಹೆಚ್ಚು ಆಕ್ಷೇಪಣೆಗಳು, ಸಲಹೆಗಳು ಮತ್ತು ದೂರುಗಳು ಬಂದಿದ್ದು ಇವುಗಳನ್ನು ದಾಖಲಿಸಿ ಕ್ರೋಢೀಕರಣ ಮಾಡಲಾಗುತ್ತಿದೆ. ಅದ್ರಲ್ಲಿ ಕೆಂಗೇರಿ ವಾರ್ಡ್ ನಾ ಬಂಡೆಮಠ ವಾರ್ಡ್ ಮಾಡಲು ಹೊರಟಿರೋದಕ್ಕೆ ಬಹಳ ವಿರೋಧಗಳು ಸೃಷ್ಟಿಯಾಗಿವೆ..
Kshetra Samachara
08/07/2022 09:01 pm