ಬೆಂಗಳೂರು: ಬಿಬಿಎಂಪಿ ಚುನಾವಣೆ ಹತ್ತಿರವಾಗ್ತಿದ್ದಂತೆ ಪಾತಕಲೋಕದ ಕತ್ತಲಲ್ಲಿ ಕುಳಿತಿದ್ದ ರೌಡಿ ಶೀಟರ್‌ಗಳು ಬಿಳಿ ಗಂಜಿ ಬಟ್ಟೆ ತೊಟ್ಟು ರಾಜಕೀಯ ಅಖಾಡಕ್ಕೆ ಧುಮುಕಲು ಅಣಿಯಾಗಿದ್ದಾರೆ.
ಒಂದು ಕಡೆ ರೌಡಿ ಅಸಾಮಿಗಳು ಚುನಾವಣೆಗೆ ನಿಲ್ಲಲು ಗುಪ್ತ ಸಿದ್ಧತೆ ನಡೆಸಿದರೆ. ಮತ್ತೊಂದು ಕಡೆ ಇಂತಹ ರೌಡಿಗಳ ಪಟ್ಟಿ ಸಂಗ್ರಹಿಸಿ ವರದಿ ನೀಡಲು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮನ್ ಗುಪ್ತಾ ಸಿಸಿಬಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಈ ವರ್ಷ ಬಿಬಿಎಂಪಿ ವಾರ್ಡ್ ಕೂಡ ಹೆಚ್ಚಾಗಿದ್ದು ಮೀಸಲಾತಿ ಮೇಲೆ ಕಣ್ಣಿಟ್ಟಿರೋ ಪಾತಕಿಗಳು ತಾವು ತಮ್ಮ ಮನೆಯವರಿಗೆ ಟಿಕೆಟ್ ಗಿಟ್ಟಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಅಲ್ಲದೆ ತಮ್ಮ ಆಪ್ತರಿಗೂ ಚುನಾವಣಾ ಕಣದಲ್ಲಿ ನಿಂತರೆ ಬೆಂಬಲಿಸುವುದಾಗಿ ಹೇಳುತ್ತಿರುವುದು ಕಂಡುಬಂದಿದೆ. ಚುನಾವಣೆ ವೇಳೆ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಿರಲು ಹಾಗೂ ಶಾಂತಿಯುತ ವಾತಾವರಣ ನಿರ್ಮಿಸಲು ನಗರ ಪೊಲೀಸರು ಮುಂದಾಗಿದ್ದಾರೆ. ಮೊದಲಿಗೆ ಯಾವ ಯಾವ ವಾರ್ಡ್ ಗಳಿಂದ ನಿಲ್ಲಲ್ಲು ಸಿದ್ಧತೆ ನಡೆಸುತ್ತಿದ್ದಾರೆ.
ಯಾವ ಪಕ್ಷದಿಂದ ಸ್ಪರ್ಧೆ ಅಥವಾ ಪಕ್ಷೇತರರಾಗಿ ನಿಲ್ಲುತ್ತಿದ್ದಾರ ? ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಯಾವ ಪಕ್ಷದಿಂದ ಟಿಕೆಟ್ ಕೇಳಿದ್ದಾರೆ. ಯಾವ ಪಕ್ಷದಲ್ಲಿ ಎಷ್ಟು ಮಂದಿ ಕ್ರಿಮಿನಲ್ ಹಿನ್ನೆಲೆಯಿರುವ ಕ್ಯಾಂಡಿಡೇಟ್ ಗಳಿದ್ದಾರೆ. ಹಣಕಾಸು ಹಿನ್ನೆಲೆ ಎಂಬುದರ ಬಗ್ಗೆ ಪೊಲೀಸರು ಕಲೆ ಹಾಕುತ್ತಿದ್ದಾರೆ.
ಈಗಾಗಲೇ ಸಿಸಿಬಿ ಪೊಲೀಸರು ಕೆಲ ರೌಡಿಶೀಟರ್ ಗಳನ್ನ ಕಚೇರಿಗೆ ಕರೆಯಿಸಿಕೊಂಡು ವಾರ್ನ್ ಮಾಡಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 110ರ ಪ್ರಕಾರ ಬಾಂಡ್ ಬರೆಯಿಸಿಕೊಂಡಿದ್ದಾರೆ. ವಿಲನ್ಸ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್, ಕಾಡುಬೀಸನಹಳ್ಳಿ ಸೋಮ, ರೋಹಿತ್ ಸೇರಿದಂತೆ 50ಕ್ಕೂ ಹೆಚ್ಚು ರೌಡಿಗಳಿಂದ ಬಾಂಡ್ ಓವರ್ ಮಾಡಿಸಿದ್ದಾರೆ.
Kshetra Samachara
12/08/2022 06:41 pm