ಬೆಂಗಳೂರು: ಪಾದರಾಯನಪುರದಲ್ಲಿ ಟ್ರಾಫಿಕ್ ಜಾಮ್ ಉಂಟು ಮಾಡುತ್ತಿರುವವರ ಮೇಲೆ ಕೇಸ್ ಹಾಕಿ. ನಾನೇ ಹೇಳ್ತಿದ್ದೀನಿ, ಜನರಿಗೆ ತೊಂದರೆ ಆಗಬಾರದು ಎಂದು ಕಾಂಗ್ರೆಸ್ ಶಾಸಕ ಜಮೀಸ್ ಅಹ್ಮದ್ ಖಾನ್ ಪೊಲೀಸರಿಗೆ ತಾಕೀತು ಮಾಡಿದ್ದಾರೆ.
ಕ್ಷೇತ್ರದಲ್ಲಿ ಇಂದು ಕುಂದುಕೊರತೆ ಆಲಿಸಿದ ಶಾಸಕ ಜಮೀರ್ ಅವರು ಸಂಚಾರ ಪೊಲೀಸರೊಂದಿಗೆ ಚರ್ಚಿಸಿದರು. ಈ ವೇಳೆ ಸುಖಾಸುಮ್ಮನೆ ಟ್ರಾಫಿಕ್ ಜಾಮ್‌ಗೆ ಕಾರಣ ಏನೂ ಎಂದು ಪೊಲೀಸರಿಗೆ ಕೇಳಿದರು. ಬಳಿಕ ಮಾತನಾಡಿದ ಅವರು, 'ನೀವು ಕೇಸ್ ಹಾಕುವಾಗ ಸ್ವಲ್ಪ ಜಾಗ್ರತೆ ಇರಲಿ ಅಷ್ಟೇ. ಸುಖಾ ಸುಮ್ಮನೆ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿದರೆ ನಿಮ್ಮ ಕೆಲಸ ನೀವು ಮಾಡಿ. ನಾನೇ ಹೇಳ್ತಿದ್ದೀನಿ' ಎಂದು ಶಾಸಕ ಜಮೀರ್ ಅಹ್ಮದ್ ಸಂಚಾರ ಪೊಲೀಸರಿಗೆ ತಿಳಿಸಿದ್ದಾರೆ.
Kshetra Samachara
27/02/2022 04:56 pm