ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ
ಆನೇಕಲ್: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ, ಬಿಜೆಪಿ ಕಾರ್ಯಕರ್ತರ ಕೆಲಸ ಮಾಡಿ ಕೊಡದ ಕಾರಣಕ್ಕೆ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣ ಸ್ವಾಮಿ ಅವರನ್ನು ವರ್ಗಾವಣೆ ಮಾಡುವಂತೆ ಖುದ್ದಾಗಿ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಿರುವ ಪತ್ರ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ
ಇನ್ನು, ಇಒ ಲಕ್ಷ್ಮೀನಾರಾಯಣಸ್ವಾಮಿ ಅಧಿಕಾರದ ಅವಧಿ 8 ತಿಂಗಳು ಮುಂಚಿತವಾಗಿಯೇ ಕಾರ್ಯನಿರ್ವಹಣಾಧಿಕಾರಿಯನ್ನು ಬೇರೆ ಕಡೆ ವರ್ಗಾವಣೆ ಮಾಡಲು ತಂತ್ರ ರೂಪಿಸಿದ್ದಾರೆ. ಕೇಂದ್ರ ಸಚಿವರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಹುದ್ದೆಗೆ ಗ್ರೇಡ್ 1 ದರ್ಜೆಯ ಅಧಿಕಾರಿಯನ್ನು ನೇಮಕ ಮಾಡಬೇಕು. ಜೊತೆಗೆ ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡಿದ ಅಧಿಕಾರಿಗೆ ನೇಮಕ ಮಾಡಬೇಕು. ಆದರೆ, ಗ್ರೇಡ್ 2 ದರ್ಜೆಯ ಜನಗಣತಿ ಮತ್ತು ಯೋಜನಾ ಆಧಿಕಾರಿ ವಿಭಾಗದಲ್ಲಿ ಕೆಲಸ ಮಾಡಿದ್ದ ಲೀಲೋದಯ ಕುಮಾರಿ ಆಯ್ಕೆ ಶಿಫಾರಸು ಮಾಡಿರೋದು ಎಷ್ಟು ಮಾತ್ರ ಸರಿ !? ಇನ್ನು ಈ ಉನ್ನತ ಹುದ್ದೆಗೆ ಅಪಮಾನ ಮಾಡಿದ್ದಾರೆ. ಅಲ್ಲದೆ, ಸರ್ಕಾರವೇ ನಿಯಮಕ್ಕೆ ವಿರುದ್ಧವಾಗಿ ಆದೇಶ ಮಾಡಿರೋದು ಎಷ್ಟು ಮಾತ್ರ ಸರಿ ಅಂತ ಸಾರ್ವಜನಿಕರಲ್ಲಿ ಟೀಕೆ ವ್ಯಕ್ತವಾಗಿದೆ.
ಇನ್ನು, ತಾಪಂ ಕಾರ್ಯನಿರ್ವಹಣಾಧಿಕಾರಿ 28 ಇಲಾಖೆ ಅಧಿಕಾರಿಗಳನ್ನು ನೋಡಿಕೊಳ್ಳುವುದು, ಪಿಡಿಒ ಮತ್ತು ಬಿಲ್ ಕಲೆಕ್ಟರ್ ವೇತನ ಬಿಡುಗಡೆ ಮಾಡುವುದು, ಬಿಲ್ ವಿಲೇವಾರಿ ಮಾಡುವ ಅಧಿಕಾರ ಹೊಂದಿರುತ್ತಾರೆ. ಗ್ರಾಪಂ ಮೇಲ್ವಿಚಾರಣೆ ಅಧಿಕಾರ ಸಹ ಇರುತ್ತದೆ. ಇಂತಹ ಮಹತ್ವದ ಹುದ್ದೆಗೆ ಜನಗಣತಿ ವಿಭಾಗದ ಮಹಿಳೆ ನೇಮಕ ಮಾಡಿರೋದು ಎಷ್ಟು ಮಾತ್ರ ಸರಿ? ಹೀಗಾಗಿ ಸರ್ಕಾರ ಕೂಡಲೇ ಆದೇಶ ಹಿಂಪಡೆದು, ಘನತೆ- ಗೌರವ ಉಳಿಸಿಕೊಳ್ಳಬೇಕಾಗಿದೆ.
- ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
30/08/2022 06:09 pm