ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಯಿಂದ ಹಾನಿಯಾದ ಮಹಾಲಕ್ಷ್ಮಿ ಲೇಔಟ್‌ ಗೆ ಭೇಟಿ ನೀಡಿದ ಸಿಎಂ!

ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ಸಿಲಿಕಾನ್ ಸಿಟಿ ಪೂರ್ತಿ ಮುಳುಗಡೆ ಆಗಿದೆ. ನಗರದ ಮಹಾಲಕ್ಷ್ಮಿ ಲೇಔಟ್ ನಾ ವೃಷಭಾವತಿನಗರದಲ್ಲಿ ಮಳೆಯಿಂದ ಸುಮಾರು ಹತ್ತಾರು ಬಡಾವಣೆಗಳು ಹಾನಿಗೆ ಒಳಗಾಗಿವೆ.

ಸಚಿವ ಕೆ.ಗೋಮಾಲಯ್ಯ ನೀಡಿದ ಮಾಹಿತಿ ಮೇರೆಗೆ ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ ಬೆಳಂಬೆಳಿಗ್ಗೆ ಹಾನಿಯಾದ ಪ್ರದೇಶಗಳಿಗೆ ಇಂದು ಭೇಟಿ ನೀಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಸಿ ನಗರ ಬಡಾವಣೆ,ವೃಷಭಾವತಿನಗರ, ಕಾಮಾಕ್ಷಿಪಾಳ್ಯ ಸುತ್ತ-ಮುತ್ತಾ ಭೇಟಿ ನೀಡಿ ನೀರು ನುಗ್ಗಿದ ಸ್ಥಳಗಳನ್ನ ಪರಿಶೀಲನೆ ನಡೆಸಿದ್ದಾರೆ. ನೀರು ನುಗ್ಗಿದ ಮನೆಗಳಿಗೆ ಹೋಗಿ ತೊಂದರೆಗೆ ಒಳಗಾದ ಸ್ಥಳೀಯರನ್ನ ಭೇಟಿ ಮಾಡಿ ಕಷ್ಟ ಆಲಿಸಿದ್ರು.

ಇನ್ಮುಂದೆ ಈ ತರ ಆಗದಂತೆ ನೋಡಿಕೊಳ್ಳುವುದಾಗಿ ಜನರಿಗೆ ಸಿಎಂ ಆಶ್ವಾಸನೆ ನೀಡಿದ್ದಾರೆ.ಸಿಎಂ ಜೊತೆ ಆರ್.ಅಶೋಕ್, ಕೆ. ಗೋಪಾಲಯ್ಯ, ವಿ.ಸೋಮಣ್ಣ, ನರೇಂದ್ರ ಬಾಬು ಮತ್ತಿತ್ತರರು ಮಳೆಯ ಹಾನಿ ಜಾಗಗಳನ್ನ ವಿಸಿಟ್ ಮಾಡಿದ್ರು.

Edited By :
PublicNext

PublicNext

19/05/2022 12:36 pm

Cinque Terre

31.49 K

Cinque Terre

1

ಸಂಬಂಧಿತ ಸುದ್ದಿ