ನಗರದಲ್ಲಿ ಎಷ್ಟು ರಸ್ತೆಗುಂಡಿ ಗಳಿವೇ ಎಂದು ನಿಮಗೆ ಗೊತ್ತಾ..? ಹಾಗಾದರೆ ನಾವು ನಿಮಗೆ ಹೇಳುತ್ತೇವೆ ಬನ್ನಿ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈಗಿನವರೆಗೂ ನಡೆಸಿರುವ ರಸ್ತೆ ಗುಂಡಿಗಳ ಸರ್ವೆಯಲ್ಲಿ 9,500 ರಸ್ತೆ ಗುಂಡಿಗಳು ಪತ್ತೆಯಾಗಿದೆಯಂತೆ. ಕೆಲವು ದಿನಗಳಿಂದ ಹೊಡೆದ ಭಾರಿ ಮಳೆಗೆ ಬೆಂಗಳೂರಿನ ಹಲವಾರು ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದೆಯಂತೆ.ಬಿಬಿಎಂಪಿ ಖಾಸಗಿ ಆಯ್ಯಪ್ ಮೂಲಕ ನಡೆಸಿದ ಸರ್ವೆಯಲ್ಲಿ ರಸ್ತೆಗಳಲ್ಲಿ ಇಷ್ಟೊಂದು ಗುಂಡಿಗಳ ಬಿದ್ದಿರೋದು ಪತ್ತೆಯಾಗಿದೆ.
ರಸ್ತೆಗುಂಡಿಗಳ ಮೇಲೆ ದಿನವೂ ವಾಹನ ಸವಾರರು ಓಡಾಡಿ ಬೆನ್ನುನೋವು ಮತ್ತು ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಕಮರ್ಷಿಯಲ್ ವೆಹಿಕಲ್‌ಗಳು ಮತ್ತು ಆಟೋ ಚಾಲಕರು ಇದೇ ರಸ್ತೆಗಳ ಮೇಲೆ ತಮ್ಮ ವಾಹನವನ್ನುಓಡಿಸಿ ಬೆನ್ನು ನೋವಿಂದ ಪರದಾಡುತ್ತಿದ್ದಾರೆ.
ಇಲ್ಲಿಯವರೆಗೂ 9,500 ರಸ್ತೆ ಗುಂಡಿಗಳು app ಮೂಲಕ ನಡೆಸಿದ ಸರ್ವೆಯಲ್ಲಿ ಪತ್ತೆಯಾಗಿದೆ ಮತ್ತು ಒಂದಾದ ಮೇಲೊಂದು ರಸ್ತೆ ಗುಂಡಿಗಳನ್ನು ಮುಚ್ಚಿ ಕೊಂಡು ಬರಲಾಗುತ್ತಿದೆ. ಕೆಲವು ದಿನಗಳಿಂದ ಸುರಿದ ಭಾರಿ ಮಳೆಗೆ ರಸ್ತೆಯ ಮೇಲೆ ಗುಂಡಿಗಳು ಉಂಟಾದವು. ಇವುಗಳನ್ನು ಸಂಬಂಧಪಟ್ಟ ಇಂಜಿನಿಯರ್‌ಗಳಿಗೆ ಕೂಡಲೇ ಸರಿ ಪಡಿಸಲು ಹೇಳಿದ್ದೇನೆ ಮತ್ತು ಸಾರ್ವಜನಿಕರು ಕೂಡ ಸ್ಟ್ರೀಟ್ ಆಪ್ ನಲ್ಲಿ ತಮ್ಮ ಏರಿಯಾದ ಫೋಟೋಗಳನ್ನು ಫೋಟೋ ತೆಗೆದು ಅಪ್ಲೋಡ್ ಮಾಡಿದರೆ ಕೂಡಲೇ ಸ್ಥಳೀಯ ಇಂಜಿನಿಯರುಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಗುಂಡಿಗಳನ್ನು ಸರಿಪಡಿಸಲು ಮುಂದಾಗುತ್ತಾರೆ ಎಂದು ಬಿಬಿಎಂಪಿ ಸ್ಪೆಷಲ್ ಕಮಿಷನರ್ ತ್ರಿಲೋಕಚಂದ್ರ ಪಬ್ಲಿಕ್ ನೆಕ್ಸ್ಟ್ ಗೆ ಹೇಳಿದರು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
17/05/2022 04:49 pm