ಮಹಾನಗರದ ಆಡಳಿತದ ಹೊಣೆಹೊತ್ತ ಅಧಿಕಾರಿಗಳು ಹೇಳಿದ್ದೇ ಲೆಕ್ಕ ಮಾಡಿದ್ದೇ ಕೆಲ್ಸ ಆಗಿ ಬಿಟ್ಟಿದೆ. ಬೆಂಗಳೂರು ರಾಜ ಕಾಲುವೆ ಹೂಳು ತೆಗೆಯುವ ಕೆಲಸದಲ್ಲಿ ಸರ್ಕಾರವನ್ನೇ, ಚೀಫ್ ಕಮಿಷನರ್ ಅವ್ರನ್ನೇ ಕತ್ತಲ್ಲಲ್ಲಿ ಇಟ್ಟರೇ ಎಂಬ ಪ್ರಶ್ನೆ ಮೂಡುತ್ತಿದೆ.
ಕಾರಣವೇನೆಂದ್ರೆ ಕಳೆದ 16 ವರ್ಷ ದಲ್ಲಿ 3,800 ಕೋಟಿ ರೂ. ರಾಜ ಕಾಲುವೆ ದುರಸ್ತಿಗೆ ಬಿಬಿಎಂಪಿ ಹಣ ವಿನಿಯೋಗಿಸಿದೆ. ಆದರೆ ಪ್ರವಾಹದ ಸಮಸ್ಯೆ ಮಾತ್ರ ನಗರದಲ್ಲಿ ನಿಂತಿಲ್ಲ.
ಹೌದು ..ಬಿಬಿಎಂಪಿ ವ್ಯಾಪ್ತಿಯಲ್ಲಿ 842 ಕಿ.ಮೀ ರಾಜ ಕಾಲುವೆ ಇದೆ. ಅದರಲ್ಲಿ 2006-2021 ರಲ್ಲಿ 489 ಕಿ.ಮೀ ಮಾತ್ರ ರಾಜಕಾಲುವೆ ದುರಸ್ತಿ ಕಾರ್ಯವಾಗಿದೆ. ಇದರ ನಡುವೆ ಹೂಳು ತೆಗೆಯಲು ಕಳೆದ ವರ್ಷ 100 ಕೋಟಿ ಬಿಡುಗಡೆ ಆಗಿದ್ದು, ಅಂದಾಜು 30 ಕೋಟಿ ಹಣ ಗುತ್ತಿಗೆದಾರ ಜೇಬು ಸೇರಿದೆ.
ಆದರೆ ಇಲ್ಲಿಯವರೆಗೂ ಕೆಲಸ ಎಷ್ಟು ಆಗಿದೆ. ಯಾವ ಭಾಗದಲ್ಲಿ ಕಾಮಗಾರಿ ಪೂರ್ಣವಾಗಿದೆ ಎಂಬುದನ್ನು ಪರಾಮರ್ಶಿಸಲು ಯಾರೂ ಹೋಗಿಲ್ಲ. ಗುತ್ತಿಗೆದಾರ ನೀಡಿದ್ದೆ ಲೆಕ್ಕ, ಅದನ್ನ ಮಕ್ಕಿಕಾ ಮಕ್ಕಿ ಮಾಡಿ ಬಿಲ್ ಕೂಡಾ ಪಾವತಿಸಿದ್ದಾರೆ ಪಾಲಿಕೆ ಇಂಜನೀಯರ್‌ಗಳು.
ಪ್ರತಿ ವರ್ಷದಂತೆ ಹೊಸ ಕೇರಿಹಳ್ಳಿ, ರಾಜರಾಜೇಶ್ವರಿ ನಗರ ಯಲಹಂಕ ಭಾಗದಲ್ಲಿ ಮೋರಿ ನೀರು ರಸ್ತೆಗೆ ಬರುತ್ತೆ. ಮನೆಗಳಿಗೂ ನುಗ್ಗುತ್ತಿದೆ. ಈ ಬಗ್ಗೆ ಕೇಳಿದ್ರೆ ಆರೋಪಗಳು ಸತ್ಯಕ್ಕೆ ದೂರವಾದದ್ದು ಅಂತಾರೆ ಪಾಲಿಕೆ ಆಡಳಿತ ವರ್ಗ.
PublicNext
20/05/2022 06:18 pm