ಬೆಂಗಳೂರು: ಪಿಎಸ್ ಐ ಅಕ್ರಮ ಕುರಿತು ಹಿರಿಯ ವಕೀಲ ಬಾಲನ್ ಕೂಡ ಕಿಡಿಕಾರಿದ್ದು.1200 ಅಸಿಸ್ಟೆಂಟ್ ಪ್ರೊಫೆಸರ್ 545 ಪಿಎಸ್ ಐ ಹುದ್ದೆಯಲ್ಲಿ ಅಕ್ರಮ ನಡೆದಿದೆ. ದೊಡ್ಡವರ ಕೈವಾಡ ಇಲ್ಲದೇ ಖಾಸಗಿ ಜಾಗದಲ್ಲಿ ಟೆಸ್ಟ್ ಹೇಗಾಯ್ತು? OMR ಶೀಟ್ ಹೇಗೆ ಚೇಂಜ್ ಆಯ್ತು..? ಬ್ಲೂ ಟೂತ್ ಹೇಗ್ ಬಂತು? ಎಂದು ಪ್ರಶ್ನೆಗಳ ಬಾಣವನ್ನೇ ಬಿಟ್ಟಿದ್ದಾರೆ.
ಅಲ್ಲದೇ ಆರ್.ಎಸ್.ಎಸ್. ಶಾಖಾದವರನ್ನ ತಂದು ಪಿ.ಎಸ್.ಐ ಮಾಡ್ತಿದ್ದಾರೆ ಎನ್ನುವ ಅನುಮಾನ ಕಾಡ್ತಿದೆ ಎಂದು ದೂರಿದ್ದಾರೆ. ರಾಜ್ಯದಲ್ಲಿ ಎಲ್ಲಾ ಇಲಾಖೆಯಲ್ಲೂ ಆರ್ ಎಸ್ ಎಸ್ ಅವರನ್ನು ಕುರಿಸೋ ಹುನ್ನಾರ ನಡೀತಿದೆ. ಎಲ್ಲಾ ಠಾಣೆಯಲ್ಲೂ ಆರ್ ಎಸ್ ಎಸ್ ಅವ್ರು ಬಂದ್ರು ಬೇರೆ ಕಮ್ಯೂನಿಟಿ ಅವ್ರು ಸ್ಟೇಷನ್ ಗೆ ಬರಬಾರದು ಎಂದು ಹುನ್ನಾರ ನಡೆಸಿದ್ದಾರೆ.
ದಲಿತರು ಹಿಂದುಳಿದವ್ರು ತಪ್ಪು ಮಾಡಿದ್ರೆ ಬುಲ್ಡೋಜರ್ ಹೋಗತ್ತೆ ಅಂತಾರೇ, ಇವಾಗ ಅಮೃತ್ ಪೌಲ್ ,ಗೃಹಮಂತ್ರಿ ಮನೆ ಬಳಿ ಬುಲ್ಡೋಜರ್ ಹೋಗತ್ತಾ ಎಂದರು. ಅಲ್ಲದೇ ಹೈ ಕೊರ್ಟ್ ಜಡ್ಜ್ ಮಾನಿಟರಿಂಗ್ ನಲ್ಲಿ ಎಸ್.ಐ.ಟಿ ರಚಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
PublicNext
04/05/2022 07:21 pm