ಬೆಂಗಳೂರು: ಆರೋಗ್ಯ ಇಲಾಖೆಯಿಂದ ವಿತರಿಸಲಾಗುವ ಆಯುಷ್ಮನ್ ಆರೋಗ್ಯ ಕರ್ನಾಟಕ ಕಾರ್ಡ್ ಗಳು ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ತಲುಪಿಸಲು ಅಗತ್ಯ ಕ್ರಮ ವಹಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕೆ. ಶ್ರೀನಿವಾಸ್ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯಡಿ ಕರ್ನಾಟಕ ಆರೋಗ್ಯ ಗುರುತಿನ ಚೀಟಿ ಸೃಜನೆ ಕುರಿತು ಸಭೆಯಲ್ಲಿ ಮಾತಾನಾಡಿದರು.
ಬೆಂಗಳೂರು ನಗರದ ಐದು ತಾಲ್ಲೂಕುಗಳಲ್ಲಿ 16,76,485 ಜನಸಂಖ್ಯೆ ಹೊಂದಿದ್ದು ಈವರೆಗೆ ಅದರಲ್ಲಿ 2.65 ಲಕ್ಷ ಆರೋಗ್ಯ ಕಾರ್ಡ್ ಅನ್ನು ವಿತರಿಸಲಾಗಿದೆ. ಗ್ರಾಮೀಣ ಭಾಘಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಶಿಬಿರಗಳನ್ನು ಅಯೋಜಿಸಿ ಅಸಂಘಟಿತ ವಲಯಗಳಾದ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಪೌರ ಕಾರ್ಮಿಕರನ್ನು ಗುರುತಿಸಿ ಆದ್ಯತೆ ಮೇರೆಗೆ ಆರೋಗ್ಯ ಕಾರ್ಡ್ ವಿತರಿಸುವಂತೆ ತಿಳಿಸಿದರು.
Kshetra Samachara
02/10/2022 12:31 pm