ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾತ್ರೋ ರಾತ್ರಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ..!

ಬೆಂಗಳೂರು: ಬೆಂಗಳೂರಿನ ಜಲಾವೃತ ಪ್ರದೇಶಗಳಲ್ಲಿ ರೌಂಡ್ಸ್ ಹೊಡೆದ ಸಿಎಂ ಬಸವರಾಜ್ ಬೊಮ್ಮಾಯಿ ಮಳೆ ಹಾನಿ ಪ್ರಮಾಣದ ಬಗ್ಗೆ ಪರಿಶೀಲಿಸಿದ್ದಾರೆ. ಮಹದೇವಪುರ ಸುತ್ತಮುತ್ತ ಹಾಗೂ ಇನ್ನಿತರ ಪ್ರಮುಖ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿಎಂ ಈ ಸಂದರ್ಭವವನ್ನೂ ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕು. ಬಿಬಿಎಂಪಿ ಅಧಿಕಾರಿಗಳು ಕಳೆದ 4 ದಿನಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಇಷ್ಟು ದೊಡ್ಡಪ್ರಮಾಣದ ಮಳೆ ಬಂದು ಎಂಥದ್ದೇ ಸಾಮರ್ಥ್ಯ ಇರುವ ಚರಂಡಿಯಾದರೂ ನೀರು ತುಂಬಿ ಹರಿಯುತ್ತಿದೆ. ಕೆರೆಗಳೂ ತುಂಬಿವೆ. ಕಾಲುವೆಗಳ ಅತಿಕ್ರಮ ತೆರವು ಮತ್ತು ಬಹುತೇಕವಾಗಿ ಮಹದೇವಪುರ ಮತ್ತು ಬೊಮ್ಮನಹಳ್ಳಿಯಲ್ಲಿ ನಿಯಂತ್ರಣ ಮಾಡಲಾಗಿದೆ. 2-3 ಭಾಗದಲ್ಲಿ ಸಮಸ್ಯೆ ಇದ್ದು ಅಲ್ಲಿಯೂ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.

ರಾಜಕೀಯ ಮಾಡಲು ಇದು ಸಂದರ್ಭವಲ್ಲ. ಬೆಂಗಳೂರಿನ ಇತರ ಭಾಗದಲ್ಲಿ ಆತಂಕಪಡುವಂತಿಲ್ಲ. 7 ವಲಯಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆತಂಕವಿಲ್ಲ. ಮಹದೇವಪುರದಲ್ಲಿ ಅತಿಕ್ರಮಣದಿಂದ ಸಮಸ್ಯೆ ಉಂಟಾಗಿದೆ. ಕೆಳ ಹಂತದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಇಲ್ಲಿ ಯಾವ ರೀತಿ ಜನರಿಗೆ ಸಹಾಯ ಮಾಡಬಹುದು ಹಾಗೂ ನಿಭಾಯಿಸುವ ಬಗ್ಗೆ ಮುಕ್ತವಾಗಿ ಸಲಹೆ ನೀಡಬಹುದು. ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.

Edited By : Shivu K
PublicNext

PublicNext

07/09/2022 12:54 pm

Cinque Terre

21.05 K

Cinque Terre

0

ಸಂಬಂಧಿತ ಸುದ್ದಿ