ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಿಸರದ ಅರಿವೂ ಮೂಡಿಸಿದ ವಿವೇಕಾನಂದ ಕಾಲೇಜು ಸಿಬ್ಬಂದಿ..!

ಬೆಂಗಳೂರು : ಸಿಲಿಕಾನ್ ಸಿಟಿ ಸದ್ಯದ ಪರಿಸ್ಥಿತಿ ಹೇಳತೀರದ್ದು. ಕಣ್ಣು ಹಾಯಿಸಿದಲ್ಲೇಲ್ಲ ಬರೀ ನೀರೇ ನೀರೂ. ಈ ಪರಿಸ್ಥಿತಿಗೆ ಕಾರಣ ಪರಿಸರ ನಾಶ ಎಂದರೆ ತಪ್ಪಾಗಲಾರದು.

ಈ ಹಿನ್ನಲೆ ವಿದ್ಯಾರ್ಥಿಗಳಿಗೆ ಪರಿಸರದ ಅರಿವೂ ಮೂಡಿಸಬೇಕೆಂದು ಬೆಂಗಳೂರಿನ ಕುಂಬಳಗೋಡು ಸಮೀಪದ ವಿವೇಕಾನಂದ ಕಾಲೇಜು ವತಿಯಿಂದ ಪರಿಸರದ ಜಾಗೃತಿ ಕಾರ್ಯಕ್ರಮ ಮಾಡಲಾಯಿತು.

ಪರಿಸರವನ್ನ ಹಾಳು ಮಾಡಿ ಈಗ ಅನುಭವಿಸುತ್ತಿರುವ ಕಷ್ಟಗಳು ಒಂದಲ್ಲ ಎರಡಲ್ಲ. ಪರಿಸರಕ್ಕೆ ನಾವು ಎಷ್ಟು ತೊಂದರೆ ಕೊಡುತ್ತೇವೊ. ಆ ಪರಿಸರ ನಮಗೆ ಹತ್ತು ಪಟ್ಟು ಮರಳಿ ಕೊಡುತ್ತದೆ. ಹಾಗೆ ಪರಿಸರಕ್ಕೆ ನಾವು ಒಳ್ಳೆಯದನ್ನೆ ಮಾಡಬೇಕು ಎಂದು ಮಕ್ಕಳಿಗೆ ಪರಿಸರ ಅರಿವಿನ ಕಾರ್ಯಕ್ರಮ ಮಾಡಲಾಯಿತು.

ಈಗಿನ ಮಕ್ಕಳಿಗೆ ಈ ಹಸಿರೇ ಉಸಿರು ಎನ್ನುವ ವಿಷಯವನ್ನ ಮನದಟ್ಟು ಮಾಡಲಾಯಿತು. ವಿವೇಕಾನಂದ ಕಾಲೇಜಿನಲ್ಲಿ ಮರ ಗಿಡಗಳು ಹೆಚ್ಚಿದು ಹೊಸದಾಗಿ ಅಡ್ಮಿಷನ್ ಆಗುವ ವಿದ್ಯಾರ್ಥಿಗಳಿಗೆ ಗೋಗ್ರಿನ್ ಎಂದು ಅರಿವು ಮೂಡಿಸಿದ್ದು ಸಂತಸ ವಿಷಯ.

ಒಟ್ಟಿನಲ್ಲಿ ಪ್ರತಿ ವಿದ್ಯಾಕೇಂದ್ರದಲ್ಲಿಯೂ ಈ ರೀತಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಸರ ಉಳಿಸಿ ಬೆಳೆಸಬೇಕಿದೆ.

-ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..

Edited By : Shivu K
Kshetra Samachara

Kshetra Samachara

07/09/2022 08:43 am

Cinque Terre

2.93 K

Cinque Terre

0

ಸಂಬಂಧಿತ ಸುದ್ದಿ