ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಉರಗ ರಕ್ಷಕ ಸ್ನೇಕ್ ಲೋಕೇಶ್ ಇನ್ನಿಲ್ಲ : ಹಾವು ಕಚ್ಚಿ ಆಸ್ಪತ್ರೆ ಸೇರಿದ್ದವನ ಮೆದುಳು ನಿಷ್ಕ್ರಿಯ ಸಾವು

ನೆಲಮಂಗಲ: ಆತನಿಗೆ ವನ್ಯಜೀವಿಗಳು, ಹಾವಿಗಳೆಂದರೆ ಬಲು ಪ್ರೀತಿ, ಅದರಲ್ಲೂ ಉರಗ ರಕ್ಷಣೆಯನ್ನೇ ಜೀವಾಳ ಮಾಡಿಕೊಂಡು 55 ಸಾವಿರಕ್ಕೂ ಹೆಚ್ಚು ಹಾವುಗಳನ್ನ ಸಂರಕ್ಷಣೆ ಮಾಡಿದ್ದ.

ಒಂದು ಲಕ್ಷ ಹಾವುಗಳನ್ನ ಸಂರಕ್ಷಿಸುವ ಗುರಿಯನ್ನು ಹೊಂದಿದ್ದವ ಕೊನೆಗೆ ಸಾವನ್ನಪ್ಪಿದ್ದು ಅದೇ ಉರಗದಿಂದ ಕೊನೆಯುಸಿರೆಳೆದಿದ್ದಾನೆ. ಅಷ್ಟಕ್ಕೂ ಈ ಘಟನೆ ನೆಡೆದಿದ್ದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.

ಹೌದು ಹೀಗೆ ವಿವಿಧ ಪ್ರಭೇದದ ಹಾವುಗಳನ್ನ ಮತ್ತು ವನ್ಯಜೀವಿಗಳನ್ನ ರಕ್ಷಿಸುತ್ತಿರುವ ಫೋಟೋದಲ್ಲಿ ಕಾಣ್ತಿರೋ ಈತನ ಹೆಸ್ರು ಲೋಕೇಶ್ ಅಲಿಯಾಸ್ ಸ್ನೇಕ್ ಲೋಕಿ. ಮೂಲತಃ ನೆಲಮಂಗಲ ನಗರದ ಮಾರುತಿ ಲೇಔಟ್ ನಿವಾಸಿ. ಮೃತ ಸ್ನೇಕ್ ಲೋಕೇಶ್ ಇದುವರೆಗೂ ಸುಮಾರು 55 ಸಾವಿರ ಹಾವುಗಳನ್ನ ಸಂರಕ್ಷಣೆ ಮಾಡಿದ್ದು, ಆ ಹಾವಿನಿಂದಲೇ ಇಂದು ಕೊನೆಯುಸಿರೆಳೆದಿದ್ದಾರೆ.

ಕಳೆದ ಬುಧವಾರ ತಾಲ್ಲೂಕಿನ ದಾಬಸ್ಪೇಟೆ ಚಂದನ ಹೊಸಹಳ್ಳಿಯ ದಯಾನಂದ ಎನ್ನುವ ರೈತನ ಮನೆಯಲ್ಲಿ ನಾಗರಹಾವೊಂದನ್ನ ಸಂರಕ್ಷಣೆ ಮಾಡಲು ಹೋಗಿ, ಆಕಸ್ಮಿಕವಾಗಿ ಹಾವು ಸ್ನೇಕ್ ಲೋಕೇಶ್ನ ಕೈಗೆ ಎರಡು ಬಾರಿ ಕಚ್ಚಿದೆ.

ಆ ವೇಳೆ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು, ಬಳಿಕ ಗಂಭೀರ ಸ್ಥಿತಿಗೆ ತಲುಪುತ್ತಿದ್ದಂತೆ 2 ದಿನಗಳ ನಂತ್ರ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗಿಲ್ಲ ಲೋಕೇಶ್ ಮೆದುಳು ನಿಷ್ಕ್ರಿಯಗೊಂಡು ಕೊನೆಯುಸಿರೆಳೆದಿದ್ದಾರೆ.

ಅಲ್ಲದೆ ಕಾಡು ಪ್ರಾಣಿಗಳಿಂದ ಮನುಷ್ಯನ ಮೇಲೆ ಹಲ್ಲೆ ಅಥವಾ ಮನುಷ್ಯನ ಜೀವಕ್ಕೆ ಆಪತ್ತಾದಾಗ ಸರ್ಕಾರ ಸಹಾಯಧನ ಘೋಷಣೆ ಮಾಡುತ್ತೆ, ಆದ್ರೆ ಉರಗ ರಕ್ಷಕರಿಗೆ ಯಾವುದೇ ರೀತಿಯ ಅನುದಾನ ಕೊಡುತ್ತಿಲ್ಲ.

ಸಮಾಜ ಸೇವೆ ಮಾಡುತ್ತಿರೋ ಉರಗ ರಕ್ಷಕರಿಗೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸೇರಿದಂತೆ ಅನುದಾನ ಬಿಡುಗಡೆ ಮಾಡಬೇಕೆಂದು ಹಲವರು ಒತ್ತಾಯಿಸಿದ್ದಾರೆ ಒಟ್ಟಾರೆ ತನ್ನ ಜೀವಮಾನವನ್ನೆಲ್ಲಾ ವನ್ಯಜೀವಿ ಮತ್ತು ಉರಗರಕ್ಷಣೆಗಾಗಿ ಮುಡುಪಾಗಿಟ್ಟಿದ್ದ ಸ್ನೇಕ್ ಲೋಕೇಶ್ ಇಂದು ಉರಗದಿಂದಲೇ ಕೊನೆಯುಸಿರು ಎಳೆದಿರುವುದು ವಿಪರ್ಯಾಸವೇ ಸರಿ..

ಸುಮಿತ್ರ ಪಬ್ಲಿಕ್ ನೆಕ್ಸ್ಟ್ ನೆಲಮಂಗಲ

Edited By : Shivu K
PublicNext

PublicNext

23/08/2022 09:17 pm

Cinque Terre

23.31 K

Cinque Terre

0

ಸಂಬಂಧಿತ ಸುದ್ದಿ