ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಸ್ತೆಯಲ್ಲಿ ಹೋರಿಗಳ ಕಾದಾಟ: ಜನರಿಗೆ ಪರದಾಟ

ಬೆಂಗಳೂರು: ಹೋರಿಗಳ ಕಾದಾಟಕ್ಕೆ ಏರಿಯಾದ ಜನ ಭಯಭೀತರಾಗಿದ್ದು, ಸುತ್ತಮುತ್ತಲಿದ್ದ ಕೆಲ ವಾಹನಗಳು ಡ್ಯಾಮೇಜ್ ಆದ ಘಟನೆ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ.

ಈ ಏರಿಯಾದಲ್ಲಿ ಹೋರಿಗಳು ಸುಮಾರು ಒಂದು ಗಂಟೆಗಳ ಕಾಲ ಕಾದಾಟ ನಡೆಸಿವೆ. ನಿನ್ನೆ ಮಧ್ಯಾಹ್ನ ಬಿಟಿಎಂ ಲೇಔಟ್ ನ ನಾಲ್ಕನೇ ಕ್ರಾಸ್ ನಲ್ಲಿ ಎರಡು ಹೋರಿಗಳು ಕಾಳಗ ನಡೆಸಿ ಜನರಿಗೆ ಕೆಲಕಾಲ ಆತಂಕ ಉಂಟು ಮಾಡಿವೆ.. ಇನ್ನೊಂದು ಕಡೆ ಮನೆಯಾಚೆ ನಿಲ್ಲಿಸಿದ್ದ ವಾಹನಗಳು ಗಲಾಟೆಗೆ ಕೊಂಚ ಡ್ಯಾಮೇಜ್ ಕೂಡ ಆಗಿವೆ..

ಹೋರಿಗಳ ಅಪರೂಪದ ಫೈಟಿಂಗ್ ಕಂಡು ಜನರು ಮೊದಲು ಭಯದಿಂದಲೇ ನೋಡ್ತಾ ನಿಂತಿದ್ರು. ಆದರೆ ಯಾವಾಗ ಗಲಾಟೆ ವಿಕೋಪಕ್ಕೆ ತಿರುಗಿತೋ ಜನ ಓಡಲು ಮುಂದಾದರು. ಹಾಗೇ ಅಲ್ಲಿ ಸಂಚರಿಸುತ್ತಿದ್ದ ವಾಹನಗಳು ವಾಪಾಸ್ ಹೋಗುತ್ತಿದ್ವು.

ಅಂತೂ ಸಿನಿಮಾದಲ್ಲಿ ಇಂತಹ ದೃಶ್ಯಗಳನ್ನ ನೋಡಿದ್ದ ಜನ ಇಲ್ಲಿ ಲೈವ್ ಆಗಿ ಹೋರಿಗಳ ಕಾಳಗ ನೋಡಿ ಶಾಕ್ ಆಗಿದ್ದಂತೂ ನಿಜ.

-ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.

Edited By : Shivu K
Kshetra Samachara

Kshetra Samachara

10/08/2022 08:45 pm

Cinque Terre

2.86 K

Cinque Terre

0

ಸಂಬಂಧಿತ ಸುದ್ದಿ