ದೇವನಹಳ್ಳಿ:ಬಯಲುಸೀಮೆ ಪ್ರದೇಶದಲ್ಲಿ ಯಾವುದೇ ಶಾಶ್ವತ ನೀರಾವರಿ ಮೂಲಾಧಾರಗಳಿಲ್ಲ.ಎತ್ತಿನಹೊಳೆ ನೀರು ಸಹ ಇನ್ನು ಬಂದಿಲ್ಲ. ಆದರೆ ಮಳೆಗಾಲದಲ್ಲಿ ಈ ಭಾಗದಲ್ಲಿ ಕೆರೆಯಿಂದ ಕೆರೆಗೆ ಕೋಡಿ ರೂಪದಲ್ಲಿ ಹರಿಯುವ ಐದು ನದಿಗಳು ನಂದಿಕಣಿವೆ (ನಂದಿಬೆಟ್ಟ ಸುತ್ತಾಮುತ್ತಾ) ಪ್ರದೇಶದ ಪಂಚಗಿರಿಗಳಲ್ಲಿ ಹುಟ್ಟಿ ಹರಿಯುತ್ತವೆ.
ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಈ ನದಿಗಳಲ್ಲಿ ದಕ್ಷಿಣ ಪಿನಾಕಿನಿಯೂ ಒಂದು. ಚನ್ನಗಿರಿಬೆಟ್ಟದ ಪೂರ್ವದಲ್ಲಿ ಹುಟ್ಟಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ವಿಜಯಪುರ, ಬೂದಿಗೆರೆ, ಹೊಸಕೋಟೆ, ಕಾಡುಗುಡಿ, ವರ್ತೂರು, ಬೆಳ್ಳಿಕೆರೆ, ಮುಗಳೂರು ಮೂಲಕ ಕರ್ನಾಟಕ ದಾಟಿ ತಮಿಳುನಾಡಿನ ಬಾಗಲೂರು, ಹೊಸೂರು ಮೂಲಕ ತಮಿಳುನಾಡಿನಲ್ಲಿ ಹರಿದು ಪಾಲಾರ್ ನದಿ ಮೂಲಕ ಸಮುದ್ರ ಸೇರುತ್ತದೆ.
ಇಂತಹ ಹಿನ್ನೆಲೆಯ ಈ ನದಿ 25 ವರ್ಷಗಳ ನಂತರ ಮೈತುಂಬಿ ಹರಿಯುತ್ತಿದ್ದು,ದೇವನಹಳ್ಳಿಯ ಗಂಗವಾರ ಬಳಿ 100 ಮೀಟರ್ ಅಗಲವಾಗಿ ಹರಿದು, ಹಿಂದಿನ ಗತವೈಭವ ಮತ್ತೆ ಮರುಕಳಿಸಿದೆ. ಈ ಬಗ್ಗೆ ಗಂಗವಾರದ ಬಳಿ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ Walkthrough ಇಲ್ಲಿದೆ ನೋಡಿ.
PublicNext
05/08/2022 08:26 pm