ವರದಿ: ಗೀತಾಂಜಲಿ
ಬೆಂಗಳೂರು: ಮಳೆಗಾಲ ಶುರುವಾಗ್ತಿದಂತೆ ಎಲ್ಲೆಂದರಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದೆ. ಇನ್ನು ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುವ ಬುಸ್ ಬುಸ್ ನಾಗಗಳಿಂದ ಜನರಲ್ಲಿ ನಡುಕ ಶುರುವಾಗಿದೆ.
ಮಳೆಗಾಲದ ಈ ಹವಾಮಾನದಲ್ಲಿ ಮನೆಗಳಿಗೂ ಹಾವುಗಳು ಎಂಟ್ರಿ ಕೊಡುತ್ತಿವೆ. ಬೆಚ್ಚಗಿನ ಜಾಗ ಅವಲಂಬಿಸಲು ಸ್ಥಳವನ್ನ ಹುಡುಕುತ್ತೆ. ಹೀಗಾಗಿ ಮನೆಗಳಿಗೂ ಹಾವುಗಳು ನುಗ್ಗುತ್ತಿದೆ. ಗಿಡಗಳಲ್ಲಿ, ಪೊದೆಗಳಲ್ಲಿರುವ ಹಾವುಗಳು ಈಗ ಮನೆ ಒಳಗೆ ಎಂಟ್ರಿ ಕೊಡುತ್ತಿವೆ. ಹೀಗಾಗಿ ನಗರದ ಜನರಲ್ಲಿ ಆತಂಕ ಆವರಿಸಿದೆ.
Kshetra Samachara
12/07/2022 01:37 pm