ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಸಿ ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಿದ ಶಾಸಕ ಬಿ.ಶಿವಣ್ಣ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಆನೆಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಕಾವೇರಿ ಕಾಲೇಜಿನಲ್ಲಿ ಶಾಸಕರಾದ ಬಿ. ಶಿವಣ್ಣನವರ ಗಿಡ ನೆಡುವುದರ ಮೂಲಕ ಉದ್ಘಾಟಿಸಿದರು.

ಶಾಸಕರಾದ ಬಿ. ಶಿವಣ್ಣ ಮಾತನಾಡಿ ಮರ ಗಿಡಗಳ ಸಮಾಧಿಯ ಮೇಲೆ ನಗರಗಳು ನಿರ್ಮಾಣವಾಗುತ್ತಿವೆ ಎಂದು ಆತಂಕವನ್ನು ವ್ಯಕ್ತಪಡಿಸಿದರು.

ಪ್ರತಿಯೊಬ್ಬ ಮನುಷ್ಯನು ಕಡ್ಡಾಯವಾಗಿ ಮನೆಗೊಂದು ಗಿಡ ನೆಟ್ಟು ಪರಿಸರವನ್ನು ಬೆಳೆಸಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯವಾಗುತ್ತದೆ ಇಲ್ಲವಾದರೆ ಮುಂದಿನ ಪೀಳಿಗೆ ಉತ್ತಮ ಗಾಳಿಯಿಲ್ಲದ ದಿನಗಳು ಬರುತ್ತವೆ ಅದಕ್ಕಾಗಿ ನಾವು ಪ್ರಕೃತಿಯ ಮೇಲೆ ದೌರ್ಜನ್ಯವನ್ನು ನಿಲ್ಲಿಸಬೇಕು ಎಂದು ಕರೆಕೊಟ್ಟರು.

ಮರಗಿಡಗಳು ನಮ್ಮ ಬದುಕಿನ ಒಂದು ಭಾಗವಾಗಿವೆ ಅವುಗಳಿಲ್ಲದೆ ಮನುಷ್ಯನ ಜೀವನ ಒಂದು ಕ್ಷಣವೂ ನಡೆಸಲು ಸಾಧ್ಯವಾಗುವುದಿಲ್ಲ ಪರಿಸರದ ಸಾಧಕರನ್ನು ಕಾಲಕಾಲಕ್ಕೆ ಉತ್ತೇಜಿಸುವ ಕೆಲಸಗಳು ಸರ್ಕಾರ ಮಾಡಬೇಕು ಆ ರೀತಿ ಮಾಡಿದಾಗಲೇ ಪರಿಸರ ರಕ್ಷಣೆ ಮಾಡುವ ಕೆಲಸ ಸಮಾಜದಲ್ಲಿ ಹೆಚ್ಚಾಗುತ್ತದೆ ಎಂದು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

05/06/2022 11:00 pm

Cinque Terre

2.73 K

Cinque Terre

0

ಸಂಬಂಧಿತ ಸುದ್ದಿ