ಬೆಂಗಳೂರು: ನೈಋತ್ಯ ಮುಂಗಾರು ಮಳೆ ಒಂದು ವಾರಕ್ಕಿಂತ ಮುಂಚಿತವಾಗಿ ಎಂಟ್ರಿ ಕೊಟ್ಟಿದೆ. ಈಗಾಗಲೇ ಕೇರಳಕ್ಕೆ ಎಂಟ್ರಿಕೊಟ್ಟು, ಜನರನ್ನ ಹೈರಾಣಾಗಿಸಿದೆ.
ಇನ್ನೂ ನಾಡಿದ್ದು ಬೆಂಗಳೂರು, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ನೈಋತ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಪಬ್ಲಿಕ್ ನೆಕ್ಸ್ಟ್ ಗೆ ಹವಾಮಾನ ಇಲಾಖೆ ತಿಳಿಸಿದೆ.ರಾಜ್ಯದ 10 ಸಿಟಿಗೆ ನೈಋತ್ಯ ಮುಂಗಾರು ಮಳೆ ಎಂಟ್ರಿ ಕೊಡಲಿದೆ. ಗುರುವಾರದಿಂದ ಹಳೆ ಮೈಸೂರು ಭಾಗ, ಹಾಸನ, ಚಿಕ್ಕಮಗಳೂರು, ಉಡುಪಿ, ಕೊಡಗು, ಮತ್ತಿತರ ಭಾಗಗಳಲ್ಲಿ ಜೋರು ಮಳೆಯಾಗಲಿದೆ.
ಹೀಗಾಗಿ ಈಗಾಗಲೇ ಇಂತಹ ಮಳೆ ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೆಚ್ಚಾಗಿ ಮಳೆಯಾಗುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಬೇಗ ಕೆಲಸ ಮುಗಿಸಿ ಜನ್ರು ಮನೆಗೆ ತೆರಳಬೇಕು ಮತ್ತು ಇಳಿಜಾರಿನ ಪ್ರದೇಶದವ್ರು, ಮಳೆ ನೀರು ನುಗ್ಗುವ ಜಾಗದಲ್ಲಿ ಮುಂಜಾಗ್ರತಾ ಕ್ರಮ ವಹಿಸಬೇಕು, ಹೆಚ್ಚಾಗಿ ಅನಾಹುತಗಳಾಗದಂತೆ ಬಿಬಿಎಂಪಿ ಕಾರ್ಯಪ್ರವೃತ್ತರಾಗಬೇಕಿದೆ.
Kshetra Samachara
31/05/2022 11:27 am