ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನಾದ್ಯಂತ ನಿನ್ನೆ (ಬುಧವಾರ) ಭಾರಿ ಮಳೆಯಾಗಿದೆ. ಜೋರು ಬಿರುಗಾಳಿ ಸಹಿತ ಗುಡುಗು ಸಿಡಿಲಿನ ಮಳೆಗೆ ತೋಟಗಳಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಕಂಬದ ಸಮೇತ ವಿದ್ಯುತ್ ತಂತಿ ನೆಲಕ್ಕುರುಳಿದ ಪರಿಣಾಮ, ನೀರಿನ ಸಂಪರ್ಕ ಪೈಪ್ ವ್ಯವಸ್ಥೆ ನಾಶವಾಗಿದೆ. ಕ್ಯಾಪ್ಸಿಕಂ ಸೇರಿದಂತೆ ಮೂರು ತಿಂಗಳ ಬೆಳೆಗಳ ಮೇಲೆ ಲಕ್ಷಾಂತರ ಬಂಡವಾಳ ಸುರಿದಿದ್ದ ರೈತ ಬೆಳೆ ನಾಶದಿಂದ ದಿಕ್ಕು ಕಾಣದಂತಾಗಿದ್ದಾನೆ.
ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿ ಹೋಬಳಿಯ ಗಣಗಲೂರು, ಬಾಗೂರು, ಗುಂಡೂರು, ಸಿದ್ಧನಪುರ ಸುತ್ತಾಮುತ್ತಾ ಬುಧವಾರ ಸಂಜೆ ನಾಲ್ಕು ಗಂಟೆಗಳ ಕಾಲ ಭಾರಿ ಮಳೆಯಾಗಿದೆ. ಬಿರುಗಾಳಿ ಸಹಿತ ಭಾರಿ ಮಳೆಗೆ ಲೆಕ್ಕಕ್ಕೆ ಸಿಗದಷ್ಟು ತೆಂಗಿನಮರ, ವಿದ್ಯುತ್ ಕಂಬ ಮುರಿದು ಬಿದ್ದಿವೆ. ವಿದ್ಯುತ್ ಕಂಬ ಬಿದ್ದಿದ್ದರಿಂದ ಚಪ್ಪರ ಹಾಕಿ ಬೆಳೆಯುವ ಕ್ಯಾಪ್ಸಿಕಂ ಬೆಳೆಗೆ ಕಟ್ಟಿದ್ದ ಧಾರ, ನೀಲಗೀರಿ ಗೂಟದ ವ್ಯವಸ್ಥೆ ಸಂಪೂರ್ಣ ನಾಶವಾಗಿದೆ. ಇದರಿಂದ ಲಕ್ಷಾಂತರ ಬಂಡವಾಳ ಹಾಕಿ ಬೆಳೆದಿದ್ದ ವಾಣಿಜ್ಯ ಬೆಳೆ ನಾಶವಾಗಿವೆ. ಅದರಲ್ಲೂ ಕ್ಯಾರೆಟ್, ಬೀನ್ಸ್, ಟೊಮ್ಯಾಟೊ, ಕ್ಯಾಪ್ಸಿಕಂ ಬೆಳೆ ಒಂದು ವಾರದ ಮಳೆಗೆ ಅಹುತಿಯಾಗಿ ತರಕಾರಿ ಬೆಳೆಗಳ ಬೆಲೆ ಗಗನಕ್ಕೇರಿದೆ.
ಈ ವಾರದ ಭಾರಿ ಮಳೆಯಿಂದ ಎಲ್ಲಾ ವಾಣಿಜ್ಯ ಬೆಳೆಗಳು ನಾಶವಾಗಿ ಇನ್ನಷ್ಟು ಬೆಲೆ ದುಭಾರಿಯಾದರು ಜನಸಾಮಾನ್ಯ ಏನೂ ಮಾಡಲಾಗುತ್ತಿಲ್ಲ.. ಸದ್ಯದ ಭಾರಿ ಮಳೆಗೆ ಭೂಮಿಗೆ ತಂಪನ್ನೆರೆದರು ಲಕ್ಷಾಂತರ ಬಂಡವಾಳ ಹಾಕಿ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಈ ವಾರದ ಮಳೆ ಭಾರಿ ಆಘಾತವನ್ನು ಉಂಟು ಮಾಡಿದೆ.
-ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ಹೊಸಕೋಟೆ.
Kshetra Samachara
05/05/2022 09:17 am