ಬೆಂಗಳೂರು: ಬೇಸಿಗೆಯ ಕೊನೆ ದಿನಗಳು... ಮರ- ಗಿಡಗಳು ಚಿಗುರುವ ಕಾಲ... ಈ ನಡುವೆ ಮಹಾನಗರದಲ್ಲಿಅರಳಿ ನಿಂತಿರುವ ಕಲರ್ ಫುಲ್ ಹೂವುಗಳು ಕಣ್ಣಿಗೆ ಬಲು ತಂಪು, ಮನಕ್ಕೆ ಖುಷಿ ಕೊಡುತ್ತೆ.
ನಳನಳಿಸುತ್ತಿರುವ ʼಸುಮದೋಟʼದ ರಸ್ತೆಯಲ್ಲಿ ಸಾಲುಸಾಲಾಗಿ ಚಲಿಸುತ್ತಿರುವ ವಾಹನಗಳು... ಈ ದೃಶ್ಯಾವಳಿ ಕಂಡು ಬಂದಿದ್ದು, ಬೆಂಗಳೂರಿನ ಯುನಿವರ್ಸಿಟಿ ಪರಿಸರದಲ್ಲಿ. ಈ ಆಹ್ಲಾದಕರ ವಾತಾವರಣ ವಿದ್ಯಾರ್ಥಿಗಳ ಕಲಿಕಾ ವಿಚಾರಕ್ಕೆ ಪೂರಕವೂ ಹೌದು.
ವಿದ್ಯಾರ್ಥಿಗಳ ಏಕಾಗ್ರತೆಯ ಓದಿನೊಂದಿಗೆ ಪರೀಕ್ಷೆಯ ಭಯಾತಂಕ ಹೋಗಲಾಡಿಸಲು ಪ್ರಕೃತಿಯ ಆತ್ಮೀಯತೆಯ ಸಾಮೀಪ್ಯ ತನುಮನಕ್ಕೆ ಹೆಚ್ಚುವರಿ ನೆಮ್ಮದಿ, ಉಲ್ಲಾಸ ತುಂಬುತ್ತೆ. ಪ್ರಕೃತಿ ಮಾತೆಯು ಪುಷ್ಪಗಳಿಂದ ರಸ್ತೆಯನ್ನು ಶೃಂಗರಿಸಿದಂತೆಯೇ ಶೋಭಿಸುತ್ತಿದ್ದು, ಪಾದಚಾರಿಗಳು, ವಾಹನ ಸವಾರರು ಈ ರಮ್ಯ ನೋಟವನ್ನು ಆಸ್ವಾದಿಸುತ್ತಿದ್ದಾರೆ.
PublicNext
02/05/2022 10:18 am