ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರ : ಸಿಡಿಲು ಬಡಿದು ಧಗಧಗಿಸಿದ ಮರ

ಬೆಂಗಳೂರು : ಬೆಂಗಳೂರು ಉತ್ತರ ಯಲಹಂಕದ ಕೇಂದ್ರೀಯ ವಿಹಾರ ಸಮೀಪ ಗುಡುಗು ಸಹಿತ ಭಾರಿ ಮಳೆ ಹಿನ್ನಲೆಯಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ.

ಮಳೆಯ ನಡುವೆ ಸಿಡಿಲು ಬಡಿದ ಪರಿಣಾಮ ತೆಂಗಿನ ಮರದ ತುತ್ತತುದಿಯಲ್ಲಿ ಬೆಂಕಿಕಾಣಿಸಿಕೊಂಡು ಮರ ಸುಡುತ್ತಿದೆ. ಭಾರಿ ಶಬ್ಧದ ಪರಿಣಾಮ ಜನ ಏನಾಯ್ತೋ ಎಂದು ಹೊರಬಂದು ನೋಡುವಷ್ಟರಲ್ಲಿ ತೆಂಗಿನ ಮರ ಧಗ ಧಗಿಸಿದೆ. ಇದರಿಂದ ಕೇಂದ್ರೀಯ ವಿಹಾರದ ಅಪಾರ್ಟ್ಮೆಂಟ್ ನಲ್ಲಿಯ ಜನರಲ್ಲಿ ಆತಂಕ ಶುರುವಾಗಿದೆ.

ಹಿಂದೆ ಹಿರಿಯರು ಮಳೆ ಬಂದರೆ ಮರದ ಕೆಳೆಗೆ ನಿಲ್ಲಬೇಡಿ ಎಂದು ಹೇಳುತ್ತಿದ್ದಿದ್ದು ಈ ಕಾರಣಗಳಿಂದಲೇ ಇರಬೇಕು. ಆದ್ದರಿಂದ ಮಳೆಗಾಲದ ವೇಳೆ ಜನ ಎಚ್ಚರದಿಂದ ಇರಬೇಕು. ಮಕ್ಕಳು ಹಿರಿಯ ನಾಗರೀಕರು ಹುಷಾರಾಗಿರಬೇಕು ಎಂದು ಕೆಂದ್ರೀಯ ವಿಹಾರದಲ್ಲಿ ಸಿಡಿಲು ಬಡಿದದ್ದನ್ನ ಪ್ರತ್ಯಕ್ಷವಾಗಿ ಕಂಡ ಉಮಾ ಎಂಬ ಹಿರಿಯ ನಾಗರೀಕರು ಹೇಳಿದ್ದಾರೆ.

ಉತ್ತಮ ಮಳೆ ಮತ್ತು ವಾತಾವರಣದಿಂದ ಬೆಂಗಳೂರು ಪ್ರಪಂಚದ ಏರ್ ಕಂಡೀಷನ್ ಸಿಟಿ, ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂತೆಲ್ಲಾ ಕರೆಯಿಸಿಕೊಳ್ತದೆ. ಆದರೆ ಮಳೆ ಬಂದರೆ ಮಾತ್ರ ಮಳೆ ನೀರು ಚರಂಡಿಗಳಲ್ಲಿ ಹರಿಯದೇ ರಸ್ತೆಗಳಿಗೆ ನುಗ್ಗುವುದು ಮಾತ್ರ ವಿಪರ್ಯಾಸವೇ ಸರಿ..

ಸುರೇಶ್ ಬಾಬು ಪಬ್ಲಿಕ್ ನೆಕ್ಟ್ ಬೆಂಗಳೂರು..

Edited By : Nagesh Gaonkar
PublicNext

PublicNext

01/05/2022 08:08 pm

Cinque Terre

50.9 K

Cinque Terre

0

ಸಂಬಂಧಿತ ಸುದ್ದಿ