ಬೆಂಗಳೂರು : ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರು ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ. ನಿನ್ನೆ ಒಂದು ದಿನ ಬಿಡುವು ಕೊಟ್ಟಿದ್ದ ಮಳೆರಾಯ ಇಂದು ಸಂಜೆ 6ಗಂಟೆಗೆ ಮತ್ತೆ ಗುಡುಗು ಮಿಂಚಿನೊಂದಿಗೆ ರೀ ಎಂಟ್ರಿ ಕೊಟ್ಟಿದೆ.
ಇನ್ನು ವಿವಿಧ ಕೆಲಸಕಾರ್ಯ ಮುಗಿಸಿ ಮನೆಗಳತ್ತ ತೆರಳುವ ಜನಕ್ಕೆ ಸಂಜೆಯ ಮಳೆ ಸಖತ್ ಟೆನ್ಶನ್ ಗೆ ಕಾರಣವಾಗಿತ್ತು. ಯಲಹಂಕದ ನಾಲ್ಕು ವಾರ್ಡ್ ಗಳಲ್ಲಿ ಸುಮಾರು ಅರ್ಧಗಂಟೆ ಸುರಿದ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರುನುಗ್ಗಿ ಪ್ರಯಾಣಿಕರು ಪರದಾಡಿದರು.
ಬೇಸಿಗೆಕಾಲದ ಬಿಸಿಲ ಬೇಗೆ ಕಳೆದ ಮೂರ್ನಾಲ್ಕು ದಿನಗಳಿಂದ ಕಡಿಮೆಯಾಗಿದ್ದು, ಬೆಂಗಳೂರು ಕೂಲ್ ಕೂಲ್ ಆಗಿದೆ. ಆದರೆ ಚರಂಡಿಗಳಲ್ಲಿ ಹರಿಯಬೇಕಿದ್ದ ನೀರು ರಸ್ತೆಗಳಲ್ಲಿ ಹರಿಯುತ್ತಿರುವುದು ಬೆಂಗಳೂರಿನ ಘನತೆಗೆ ಶೋಭೆಯಲ್ಲ ಎನ್ನುವುದೇ ವಿಪರ್ಯಾಸ.
BBMP ಭಾರಿ ಮಳೆಯ ಅನಾಹುತಗಳ ಬಗ್ಗೆ ಈಗಿನಿಂದಲೇ ಮುನ್ನೆಚ್ಚರಿಕೆ ವಹಿಸಬೇಕಿದೆ. ಇಲ್ಲವಾದರೆ ನಗರದ ಜನ ಸಂಕಷ್ಟಕ್ಕೆ ಸಿಲುಕಬೇಕಾಗುವುದು ಪಕ್ಕಾ.
SureshBabu. Public Next ಯಲಹಂಕ.
Kshetra Samachara
18/04/2022 10:56 pm