ಬೆಂಗಳೂರು: ಮಹದೇವಪುರದ ಕ್ಷೇತ್ರದ ವರ್ತೂರು ಕೊಡಿಯಿಂದ ಹೋಪ್ ಫಾರಂ ಸರ್ಕಲ್ ವರೆಗಿನ ಸಾಲು ಮರಗಳ ರಕ್ಷಣೆಗಾಗಿ ಪ್ರಶಾಂತ್ ಫೌಂಡೇಶನ್ ಹಾಗೂ ವೃಕ್ಷ ಬಚಾವೋ ಸಮಿತಿಯಿಂದ ಮೊಳೆ ಮುಕ್ತ ಮರಗಳು ಅಭಿಯಾನ ನಡೆಸಲಾಯಿತು.
ಬಳಿಕ ಮಾತನಾಡಿದ ಪ್ರಶಾಂತ್ ಫೌಂಡೇಶನ್ ಸಂಸ್ಥಾಪಕ ಪ್ರಶಾಂತ್ ರೆಡ್ಡಿ ಅವರು, ಖಾಸಗಿ ಕಂಪನಿಗಳು ತಮ್ಮ ಸ್ವಾರ್ಥಕ್ಕಾಗಿ ಮರಗಳಿಗೆ ತಂತಿ, ಮೊಳೆಗಳನ್ನು ಹೊಡೆಯುವ ಮೂಲಕ ತಮ್ಮ ಪ್ರಚಾರವನ್ನು ಮಾಡುತ್ತಿದ್ದಾರೆ. ಮರಗಳಿಗೆ ಮೊಳೆ ಹೊಡೆಯುವುದರಿಂದ ಅದರ ಆಯುಷ್ಯ ಕಡಿಮೆಯಾಗಿ ಬೆಳವಣಿಗೆ ಕುಂಠಿತಗೊಳ್ಳುತ್ತವೆ ಎಂದು ತಿಳಿಸಿದರು
ವೃಕ್ಷ ಬಚಾವೋ ಸಮಿತಿಯ ಮುಖ್ಯಸ್ಥ ಮಂಜುನಾಥ್ ಮಾತನಾಡಿ, ಖಾಸಗಿ ಕಂಪನಿಗಳು ಬಿಟ್ಟಿ ಪ್ರಚಾರಕ್ಕಾಗಿ ಗಿಡ ಮರಗಳಿಗೆ ರಾತ್ರೋರಾತ್ರಿ ಮೊಳೆ ಹೊಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
15/03/2022 08:09 pm