ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮ ಬೆಂಗಳೂರಿಗರಿಗೆ ಭೂಮಿ ಕಂಪಿಸಿದ ಅನುಭವ

ಬೆಂಗಳೂರು : ಎಂದಿನಂತಿದ್ದ ಬೆಂಗಳೂರಿನಲ್ಲಿ ಇಂದು ಸ್ಫೋಟದ ಸದ್ದಿನೊಂದಿಗೆ ಭೂಕಂಪನದ ಅನುಭವವಾಗಿದೆ. ಭಾರೀ ಶಬ್ದದ ಪರಿಣಮಾ ಜನ ಭಯಭೀತರಾಗಿದ್ದರು.

ನಗರದ ಹೆಮ್ಮಿಗೆಪುರ, ಕೆಂಗೇರಿ, ಜ್ಞಾನಭಾರತಿ, ಆರ್.ಆರ್. ನಗರ, ಕಗ್ಗಲಿಪುರದ, ನಾಗರಭಾವಿ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮನೆ ಮಾಡಿತ್ತು.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸ್ಥಳೀಯವಾಗಿ ಭೂಕಂಪನದ ಯಾವುದೇ ಮಾಹಿತಿ ದಾಖಲಾಗಿಲ್ಲ.

ಭೂಕಂಪ ಮಾಪನ ಸಿಸ್ಮೋಗ್ರಾಫ್ ನಲ್ಲಿ ಭೂಕಂಪನವಾದ ಮಾಹಿತಿ ಇಲ್ಲದಿರುವುದರಿಂದ ಭೂಕಂಪನ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಇನ್ನೂ ಮಧ್ಯಾಹ್ನ 12.30 ಕ್ಕೆ ನಾನು ಸ್ನಾನ ಮಾಡ್ತಾ ಇದ್ದೆ ಆಗ ಶಬ್ದ ಬಂತು.ನಮ್ಮದು ಮೊದಲನೇ ಮಹಡಿ ಇರುವ ಮನೆ ಭಾರೀ ಪ್ರಮಾಣದ ಶಬ್ದ ಕೇಳಿ ಬಂತು.ಇಡೀ ಮನೆ ನಡುಗಿದ ಅನುಭವವಾಯ್ತು.ಕೇವಲ ೨ ಸೆಕೆಂಡ್ ನಡುಗಿದ ಅನುಭವವಾಯ್ತು

ಇದೇ ಮೊದಲ ಬಾರಿಗೆ ಇಂಥ ಅನುಭವವಾಗಿದೆ.ಐಡಿಯಲ್ಸ್ ಹೋಮ್ಸ್ ಬಳಿ ಭೂಕಂಪನ ಆದ ಅನುಭವ ಮನೆ ಮಾಲೀಕ ಕುಮಾರ್ ಹೇಳಿದರು.

ಮೆಟ್ರೋ ವರ್ಕ್ ನಡೀತಾ ಇರೋದ್ರಿಂದ ಈ ಅನುಭವ ಅಂತ ಮೊದಲು ತಿಳಿದುಕೊಂಡೆ ಮಾಧ್ಯಮದಲ್ಲಿ ನೋಡಿದ ಮೇಲೆ ಗೊತ್ತಾಯಿತು ಎಂದರು.

Edited By : Shivu K
Kshetra Samachara

Kshetra Samachara

26/11/2021 08:58 pm

Cinque Terre

1.02 K

Cinque Terre

0

ಸಂಬಂಧಿತ ಸುದ್ದಿ