ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಿರಂತರ ಮಳೆಗೆ ಕೊಡಿಗೆಹಳ್ಳಿ ಅಂಡರ್ ಪಾಸ್ ಬ್ಲಾಕ್

ಬೆಂಗಳೂರು: ಕಳೆದ ಒಂದು ವಾರದಿಂದ ಬೆಂಗಳೂರು ಹಾಗೂ ಸುತ್ತಮುತ್ತ ಸುರಿಯುತ್ತಿರುವ ನಿರಂತರ ಮಳೆಯಿಂದ ಒಂದೊಂದಾಗಿ ಸಮಸ್ಯೆಗಳು ಬಯಲಿಗೆ ಬರುತ್ತಿವೆ, ಸದ್ಯ ಕೊಡಿಗೆಹಳ್ಳಿ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಬೃಹತ್ ವಾಹನಗಳನ್ನು ಹೊರತುಪಡಿಸಿ ಇನ್ಯಾವ ವಾಹನವೂ ಸಂಚರಿಸಲು ಆಗದ‌ ಪರಿಸ್ಥಿತಿ ನಿರ್ಮಾಣವಾಗಿದೆ,ಸುಮಾರು 2 ಅಡಿಗೂ ಹೆಚ್ಚು ನೀರು ಅಂಡರ್‌ಪಾಸ್‌ನಲ್ಲೇ ಶೇಖರಣೆ ಆಗಿದ್ದು ಅಂಡರ್‌ಪಾಸ್‌ಗೆ ಹೋಗುವ ಮಾರ್ಗದಲ್ಲಿ ಸುರಕ್ಷಾ ಕ್ರಮವಾಗಿ ಸ್ಥಳೀಯ ಯುವಕರೇ ಬ್ಯಾರಿಕೇಡ್ ಅಳವಡಿಸಿ ವಾಹನ ಸವಾರರನ್ನು ಎಚ್ಚರಿಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

19/11/2021 12:35 pm

Cinque Terre

408

Cinque Terre

0

ಸಂಬಂಧಿತ ಸುದ್ದಿ