ಬೆಂಗಳೂರು : ಬೆಂಗಳೂರಲ್ಲಿ ನಿಲ್ಲದ ವರುಣನ ಅಬ್ಬರದಿಂದಾಗಿ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ.
ಇನ್ನು ನಿರಂತರ ಮಳೆಯಿಂದ ಮರಗಳು ಧರೆಗುರುಳುತ್ತಿವೆ. ಇಂದು ಆರ್.ಟಿ.ನಗರದಲ್ಲಿರುವ ಸಿಎಂ ಬೊಮ್ಮಾಯಿ ಅವರ ನಿವಾಸದ ಎದುರಿನ ರಸ್ತೆ ಬಳಿ ಮರವೊಂದು ಉರುಳಿ ಬಿದ್ದಿದ್ದು ನಾಲ್ಕು ಬೈಕ್ ಗಳು ಜಖಂಗೊಂಡಿವೆ. ಇನ್ನು ರಸ್ತೆ ಮೇಲೆ ಬಿದ್ದ ಮರವನ್ನು ಪೊಲೀಸ್ ಸಿಬ್ಬಂದಿ ತೆರವುಗೊಳಿಸಿದ್ದಾರೆ.
Kshetra Samachara
11/11/2021 07:54 pm