ಆಗಸ್ಟ್ 15ರ ಸ್ವಾತಂತ್ರ್ಯ ಉತ್ಸವಕ್ಕಾಗಿ ಲಾಲ್ಬಾಗ್‌ನ ಗ್ಲಾಸ್ ಹೌಸ್‌ನಲ್ಲಿ ನಡೆಯುವ ಫ್ಲವರ್ ಶೋ ಈ ಬಾರಿ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಹೆಸರಲ್ಲಿ ನಡೆಸಲಾಗುತ್ತಿದೆ ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಗ್ಲಾಸ್ ಹೌಸ್‌ನಲ್ಲಿ 30 ಅಡಿ ಉದ್ದದ ಪುನೀತ್ ರಾಜಕುಮಾರ್ ಪ್ರತಿಮೆ ಇಡಲಾಗಿದೆ. ಮತ್ತು ಗಾಜನೂರಿನ ಮನೆ ಹೂವಿನಿಂದ ನಿರ್ಮಾಣ ಮಾಡಲಾಗುತ್ತಿದೆ. ಈ ಬಾರಿ ಡಾಕ್ಟರ್ ರಾಜಕುಮಾರ್ ಮತ್ತು ಡಾಕ್ಟರ್ ಪುನೀತ್ ರಾಜಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಗುತ್ತಿದೆ.
ಫ್ಲವರ್ ಶೋನಲ್ಲಿ ಮಣ್ಣಲ್ಲಿ ಡಾಕ್ಟರ್ ಪುನೀತರಾಜಕುಮಾರ್ ಮತ್ತು ಡಾಕ್ಟರ್ ರಾಜಕುಮಾರ್ ಚಿತ್ರವನ್ನು ಮೈಸೂರು ಸ್ಯಾಂಡ್ ಮ್ಯೂಸಿಯಂ ನಾ ಹೆಸರುವಾಸಿ ಕಲಾವಿದೆಯಾದ ಗೌರಿ ಚಿತ್ರ ಬಿಡಿಸುತ್ತಿದ್ದರು. ಇದಕ್ಕೂ ಮುನ್ನ ಗೌರಿ ಅವರು ಎರಡು ಬಾರಿ ಲಾಲ್‌ಬಾಗ್ ಫ್ಲವರ್ ಶೋನಲ್ಲಿ ಮಣ್ಣಿನಲ್ಲಿ ಚಿತ್ರ ಬಿಡಿಸಿ ಹೆಸರುವಾಸಿಯಾಗಿದ್ದರು. ಈ ಬಾರಿ ಕರ್ನಾಟಕ ರತ್ನನಿಗೆ ಗೌರವ ಸಲ್ಲಿಸಲಾಗುತ್ತಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
04/08/2022 09:52 am