ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅಗಲಕೋಟೆ ಗ್ರಾಮದಲ್ಲಿ ರಾತ್ರಿ ಸಿರಿದ ಭಾರಿ ಮಳೆಗೆ ಐದು ಮನೆಗಳು ನಾಶವಾಗಿವೆ. ರಾತ್ರಿ ಮಳೆಯಿಂದ ಇಡೀ ಅಗಲಕೋಟೆ ಗ್ರಾಮವೇ ಜಲಾವೃತಗೊಂಡಿದೆ. ಎತ್ತ ನೋಡಿದರು ಗ್ರಾಮದಲ್ಲೆಲ್ಲ ಮೂರು ಅಡಿ ನೀರು ನಿಂತು ಊರು ಜಲದಿಗ್ಭಂಧನಕ್ಕೆ ಒಳಗಾಗಿತ್ತು. ನೀರು ನಿಂತ ಹಿನ್ನೆಲೆ ರಾತ್ರಿಯೆಲ್ಲ ಜನ ನಿದ್ದೆಗೆಟ್ಟು ಜಾಗರಣೆ ಮಾಡುವಂತಾಗಿದೆ.
ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಮಳೆ ನೀರನ್ನ ಹೊರ ಹಾಕುವುದರಲ್ಲೇ ರಾತ್ರಿ ಕಳೆದಿದ್ದಾರೆ. ಚರಂಡಿ ಮತ್ತು ರಾಜ ಕಾಲುವೆ ಒತ್ತುವರಿಯಿಂದ ಅಗಲಕೋಟೆ ಗ್ರಾಮದಲ್ಲಿ ನೀರು ನಿಂತು ಅವಾಂತರಗಳಿಗೆ ಕಾರಣವಾಗಿದೆ. ಅತಿಯಾದ ಮಳೆ ಮತ್ತು ನೀರಿಂದ ಜನ ಪರಿತಪಿಸುವಂತಾಗಿದೆ..
Kshetra Samachara
05/09/2022 02:58 pm