ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅನಧಿಕೃತ ಜಾಹೀರಾತು ಫಲಕ ಅಳವಡಿಕೆ; ಪಿಬ್ಲ್ಯೂಡಿ ದೂರು ಸಲ್ಲಿಕೆ

ಆನೇಕಲ್: ಯಾವುದೇ ಪರವಾನಗಿ ಇಲ್ಲದೆ ಅನಧಿಕೃತವಾಗಿ ಜಾಹೀರಾತು ಫಲಕಗಳನ್ನು ಅಳವಡಿಸಿರುವ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಆನೇಕಲ್ ಪೊಲೀಸರಿಗೆ ದೂರು ಸಲ್ಲಿಸಿದೆ.

ಆನೇಕಲ್ ತಾಲೂಕಿನ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ಆನೇಕಲ್ ಚಂದಾಪುರ ರಸ್ತೆ ಮಧ್ಯಭಾಗದಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ಅಳವಡಿಕೆ ಮಾಡಲಾಗಿದೆ. ಅದಲ್ಲದೆ, ಅವೈಜ್ಞಾನಿಕವಾಗಿ ಹಲವಾರು ಕಡೆ ಅಳವಡಿಸಿದ್ದು, ಮಳೆ- ಗಾಳಿ ಜೋರಾಗಿ ಬಂದಾಗ ಜಾಹೀರಾತು ಫಲಕಗಳು ಸಾರ್ವಜನಿಕರ ಮೈಮೇಲೆ ಮತ್ತು ವಾಹನಗಳ ಮೇಲೆ ಬಿದ್ದು ಅವಘಡ ಸಂಭವಿಸುವ ಕಾರಣದಿಂದ ಕೂಡಲೇ ಅವುಗಳನ್ನು ತೆರವು ಮಾಡಿ, ಈ ಅನಧಿಕೃತ ಜಾಹೀರಾತು ಫಲಕಗಳ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Edited By : Nagesh Gaonkar
Kshetra Samachara

Kshetra Samachara

29/07/2022 10:27 pm

Cinque Terre

1.22 K

Cinque Terre

4

ಸಂಬಂಧಿತ ಸುದ್ದಿ