ಬೆಂಗಳೂರು: ವ್ಯಕ್ತಿಯೊರ್ವ ಟೋಯಿಂಗ್ ವಾಹನದ ಹಿಂದೆ ತನ್ನ ಬೈಕ್ ಗಾಗಿ ಬೇಡಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಈ ವಿಚಾರವಾಗಿ ಖುದ್ದು ಸಂಚಾರಿ ಆಯುಕ್ತ ರವಿಕಾಂತೇಗೌಡ ಮಾತನಾಡಿ ತಮ್ಮ ಅಧಿಕಾರಿ ಸಿಬ್ಬಂದಿ ತಪ್ಪಿಲ್ಲ ಎಂದಿದ್ದಾರೆ. ಟೋಯಿಂಗ್ ಮಾಡುವ ಮುನ್ನ ರೆಕಾರ್ಡ್ ಮಾಡಿದ್ದ ವಿಡಿಯೋ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ.
ಇನ್ನು ಬೈಕ್ ಮಾಲಿಕ ಅಬ್ರಾಹಂ ಕೂಡ ಮಾತನಾಡಿ ನಾನು ನೋಪಾರ್ಕಿಂಗ್ ನಲ್ಲಿ ಪಾರ್ಕ್ ಮಾಡಿದ್ದ ಬೈಕ್ ಟೋಯಿಂಗ್ ಮಾಡಿದ್ರು ನಂತರ ಟ್ರಾಫಿಕ್ ಜಾಮ್ ಆಗುತ್ತೆ ಅಂತ ಸ್ವಲ್ಪ ಮುಂದೆ ಹೋಗಿ ವಾಹನ ಬಿಟ್ಟಿದ್ದಾರೆ.
ಈ ವಿಡಿಯೋ ಯಾರ್ ಮಾಡಿದ್ರೋ ನನಗೂ ಅದಕ್ಕೂ ಸಂಬಂಧ ಇಲ್ಲ ಎಂದು ಅಬ್ರಹಾಂ ಸ್ಫಷ್ಟಪಡಿಸಿದ್ದಾರೆ.
PublicNext
31/01/2022 07:36 pm