ಬೆಂಗಳೂರು.- ವೀಕ್ ಎಂಡ್ ಲಾಕ್ ಡೌನ್ ಇದ್ರೂ ಜನ ರಸ್ತೆಗೆ ಬರೋದನ್ನಮಾತ್ರ ನಿಲ್ಲಿಸಿಲ್ಲ. ಕುಂಟುನೆಪ ಹೇಳಿಕೊಂಡು ರಸ್ತೆಗೆ ಬಂದ್ರು ಪೊಲೀಸ್ರು ಸುಮ್ನೆ ಬಿಡ್ತಾರ ಗಾಡಿ ಸೀಜ್ ಮಾಡಿ ಕೇಸ್ ಕೂಡ ಹಾಕ್ತಾರೆ. ಇದೇ ಇಲ್ಲೋಬ್ಬ ಟೂ ವೀಲರ್ ನಲ್ಲಿ ಬಂದು ಪೊಲೀಸ್ರ ಕೈಗೆ ಲಾಕ್ ಆಗಿ ಪರಿತಪಿಸಿದ ದೃಶ್ಯ ಕಂಡು ಬಂದಿದೆ.ಅಂದಹಾಗೆ ಇದು ನಡೆದದ್ದು ಮಾರ್ಕೇಟ್ ಸರ್ಕಲ್ ಬಳಿ, ಪೊಲೀಸ್ರ ತಪಾಸಣೆ ಸೂಕ್ತ ಕಾರಣ ನೀಡದ ಹಿನ್ನೆಲೆ ವೆಹಿಕಲ್‌ಸೀಜ್ ಮಾಡಿದ್ರೂ ಒಪ್ಪದ ಪುಣ್ಯಾತ್ಮ, ಮೊದಲಿಗೆ ಸಾರ್ ನಮಗೆ ಕೆಲಸ ಇದೆ ಎರಡು ದಿನ ನೀವೂ ಗಾಡಿ ಸೀಜ್ ಮಾಡಿದ್ರೆ ಓಡಾಡೋದು ಹೆಂಗೆ ಅಂತಿದ್ದವನು ಪೊಲೀಸ್ರು ಬುದ್ದಿ ಹೇಳಿದ ಬಳಿಕೆ ನನ್ನದು ತಪ್ಪಾಗಿದೆ ಎಂದು ಪರಿತಪಿಸಿದ್ದಾನೆ.
Kshetra Samachara
08/01/2022 04:14 pm