ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವೀಕೆಂಡ್‌ ಕರ್ಫ್ಯೂ-ಕಡಿಮೆಯಾಗದ ಜನ ಸಂಚಾರ

ಬೆಂಗಳೂರು:ವೀಕೆಂಡ್‌ ಕರ್ಫ್ಯೂ ಜಾರಿಯಲ್ಲಿದ್ರೂ ರಸ್ತೆಮೇಲೆ‌ ಸಂಚಾರ ಅಷ್ಟಾಗಿ ಕಡಿಮೆ ಯಾಗಿಲ್ಲ. ಒಂದು ಕಡೆ ಪೊಲೀಸ್ರು ತಪಾಸಣೆ ಮಾಡ್ತಿದ್ರೂ ಕಾರಣ ಹೇಳಿ ರಸ್ತೆ ಮೇಲೆ‌ ಓಡಾಡೋರ ಸಂಖ್ಯೆ‌ ಹಚ್ಚಾಗೆ ಇದೆ.‌

ನಗರದ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲೂ ಕೂಡ ಇದೇ ಪರಿಸ್ಥಿತಿ. ಮುಂಜಾನೆಯಿಂದ ಪೊಲೀಸ್ರು ರಸ್ತೆಯಲ್ಲಿ ನಿಂತು ತಪಾಸಣೆ ನಡೆಸ್ತಿದ್ದಾರೆ. ಆದ್ರೂ ವಾಹನಸವಾರರು ನೆಪ ಹೇಳಿಕೊಂಡು ರಸ್ತೆಗೆ ಬರ್ತಿದ್ದಾರೆ.

ಇನ್ನು ರಸ್ತೆಯಲ್ಲಿ ನೆಪ ಹೇಳಿ ಹೋಗುವವರ ಮಾಹಿತಿಯನ್ನು ಪೊಲೀಸ್ರು ಕಲೆ ಹಾಕ್ತಿದ್ದಾರೆ. ಸಂಜೆ ಅಥವಾ ಮತ್ತೆ ಅದೇ ವಾಹನ ತಪಾಸಣೆ ವೇಳೆ ಸಿಕ್ರೆ ಅಂತಹ ವಾಹನಗಳನ್ನು ಪೊಲೀಸ್ರು ಸೀಜ್ ಮಾಡೋದು ಪಕ್ಕಾ. ಬೆಳಿಗಿನ ಸಮಯದಲ್ಲಿ ಹಾಲು, ಹಣ್ಣು ತರಕಾರಿ ಅಂತ ರಸ್ತೆಗೆ ಬಂದಿದ್ದ ಜನ ಮಧ್ಯಾಹ್ನದ ವೇಳೆಗೆ ಯಾವ ನೆಪ ಹೇಳ್ತಾರೋ ಗೊತ್ತಿಲ್ಲ.

Edited By : Nagesh Gaonkar
Kshetra Samachara

Kshetra Samachara

08/01/2022 01:03 pm

Cinque Terre

1.05 K

Cinque Terre

0

ಸಂಬಂಧಿತ ಸುದ್ದಿ