ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶೇ 5ರಷ್ಟು ಸರಕು ಸೇವಾ ಸುಂಕ ವಿರೋಧಿಸಿ ನಾಳೆ ಯಶವಂತಪುರ ಎಪಿಎಂಸಿ ಮಾರ್ಕೇಟ್ ಬಂದ್

ವರದಿ - ಗಣೇಶ್ ಹೆಗಡೆ

ಬೆಂಗಳೂರು: ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಮೇಲೆಯೂ ಶೇ 5ರಷ್ಟು ಸರಕು ಸೇವಾ ಸುಂಕ (Goods and Service Tax – GST) ವಿಧಿಸಿರುವುದನ್ನು ಖಂಡಿಸಿ ಕೃಷಿ ಮಾರುಕಟ್ಟೆ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಹಲವು ಸಂಘಟನೆಗಳು ಎಪಿಎಂಸಿ ಶುಕ್ರವಾರ (ನಾಳೆ) ಯಾರ್ಡ್​ ಬಂದ್​ಗೆ ಕರೆ ಕೊಟ್ಟಿವೆ. ಯಶವಂತಪುರ ಎಪಿಎಂಸಿಯ ಮಾಲೀಕರು, ವರ್ತಕರು, ಕಾರ್ಮಿಕ ಸಂಘಟನೆಗಳು ಬಂದ್​ ಕರೆಗೆ ಬೆಂಬಲ ಘೋಷಿಸಿವೆ.

ಗೋಧಿ, ಅಕ್ಕಿ, ಬೇಳೆಕಾಳುಗಳಿಗೆ ಕೇಂದ್ರ ಸರ್ಕಾರವು ಶೇ 5ರ ಜಿಎಸ್​ಟಿ ಹೇರಿರುವುದನ್ನು ವರ್ತಕರು ಹಾಗೂ ಕಾರ್ಮಿಕ ಸಂಘಟನೆಗಳು ಖಂಡಿಸಿವೆ. ಕೇಂದ್ರದ ನಿರ್ಧಾರ ವಿರೋಧಿಸಿ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಯಾರ್ಡ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ. ನಾನ್ ಬ್ರಾಂಡೆಡ್ ವಸ್ತುಗಳ ವರ್ತಕರಿಗೆ ಸರ್ಕಾರದ ಹೊಸ ನಡೆಯಿಂದ ಬಹಳ ದೊಡ್ಡ ನಷ್ಟವಾಗಲಿದೆ ಎಂದು ಎಪಿಎಂಸಿ ವ್ಯಾಪಾರಿಗಳು ಹೇಳಿದ್ದಾರೆ.

ಆಹಾರ ಧಾನ್ಯಗಳ ಮೇಲೆ ಶೇ 5ರ ಜಿಎಸ್​ಟಿ ವಿರೋಧಿಸಿ ನಾಳೆ ರಾಜ್ಯ ಅಕ್ಕಿ ಗಿರಣಿದಾರರ ಸಂಘವು ಜುಲೈ 15ರಂದು ಧರಣಿಗೆ ನಿರ್ಧರಿಸಲಾಗಿದೆ. ರಾಜ್ಯದಾದ್ಯಂತ ಎಲ್ಲ ಚಟುವಟಿಕೆಗಳನ್ನ ನಿಲ್ಲಿಸಿ ಪ್ರತಿಭಟನೆ ನಡೆಸಲಾಗುವುದು. ಕೇಂದ್ರ ಸರ್ಕಾರವು ಕೂಡಲೇ ಈ ಪ್ರಸ್ತಾವನೆಯನ್ನು ಹಿಂಪಡೆಯಬೇಕು. ಜಿಎಸ್​ಟಿ ಕೌನ್ಸಿಲ್ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಸಂಘಟನೆಯ ಪ್ರತಿನಿಧಿಗಳು ಮನವಿ ಮಾಡಿದ್ದಾರೆ.

Edited By : Vijay Kumar
PublicNext

PublicNext

14/07/2022 07:15 pm

Cinque Terre

15.08 K

Cinque Terre

1

ಸಂಬಂಧಿತ ಸುದ್ದಿ