ಬೆಂಗಳೂರು:ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಹಿನ್ನೆಲೆ ಸಿಐಡಿ ಇಂದು ಬಂಧಿತ ಆರೋಪಿ ಶ್ರೀಧರ್ ಮನೆಯಲ್ಲಿ ತಪಾಸಣೆ ನಡೆಸಿತು.
ಈ ವೇಳೆ ಶ್ರೀಧರ್ ಮನೆಯಲ್ಲಿ 20 ಲಕ್ಷ ನಗದು ಪತ್ತೆಯಾಗಿದೆ. ನೇಮಕಾತಿ ವಿಭಾಗದ ಪ್ರಥಮ ದರ್ಜೆ ನೌಕರನಾಗಿದ್ದ ಶ್ರೀಧರ್
ಮಧ್ಯವರ್ತಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಹಿನ್ನೆಲೆ ಶ್ರೀಧರ್ ಬಂಧನವಾಗಿತ್ತು.
ಬಸವೇಶ್ವರ ನಗರದ ಶಾರದ ಕಾಲೋನಿಯಲ್ಲಿರೊ ಶ್ರೀಧರ್ ಮನೆಗೆ ಇಂದು ಶ್ರೀಧರ್ ನನ್ನು ಕರೆತಂದು ಸಿಐಡಿ ಮನೆ ಪರಿಶೀಲನೆ ನಡೆಸಿದೆ. ಈ ವೇಳೆ ನಗದು ಪತ್ತೆಯಾಗಿದ್ದು, ಈ ಕುರಿತು ಶ್ರೀಧರ್ ನ ಸಿಐಡಿ ವಿಚಾರಣೆ ನಡೆಸ್ತಿದೆ.
Kshetra Samachara
14/05/2022 07:18 pm