ಬೆಂಗಳೂರು: ಮೂವರು ಐಪಿಎಸ್ ಅಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಎಡಿಜಿಪಿ ಅರುಣ್ ಚಕ್ರವರ್ತಿ, ಹರಿಶೇಖರನ್ ಪಿ, ಡಿಜಿಪಿ ಡಾ.ಪಿ ರವೀಂದ್ರನಾಥ ಅವರನ್ನು ವರ್ಗಾವಣೆ ಮಾಡಲಾಗಿದೆ.
ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿದ್ದ ಡಾ.ಪಿ ರವೀಂದ್ರನಾಥ್ರನ್ನು ತರಬೇತಿ ವಿಭಾಗ ಬೆಂಗಳೂರಿಗೆ. ತರಬೇತಿ ವಿಭಾಗದ ಎಡಿಜಿಪಿಯಾಗಿದ್ದ ಹರಿಶೇಖರನ್ ಪಿರನ್ನು ಅಗ್ನಿಶಾಮಕ ಹಾಗೂ ತುರ್ತು ಸೇವ ಮತ್ತು ಎಡಿಜಿಪಿ ಅರುಣ್ ಚಕ್ರವರ್ತಿ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಎಡಿಜಿಪಿ ಆಗಿ ನೇಮಿಸಲಾಗಿದೆ.
PublicNext
04/05/2022 08:07 pm