ಸ್ಮಾರ್ಟ್ ಸಿಟಿ ಯೋಜನೆಯಡಿ ಕಾರ್ಮಿಕರಿಂದ ಮಲ ಸ್ವಚ್ಛತೆ. ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ನಿಷೇಧವಿದ್ರೂ ರಾಜ್ಯ ರಾಜಧಾನಿಯಲ್ಲಿ ಇನ್ನೂ ಆ ಕೆಲಸ ಜಾರಿಯಲ್ಲಿದೆ.
ಹೌದು ! ಯಂತ್ರಗಳನ್ನು ಉಪಯೋಗಿಸದೆ ಕಾರ್ಮಿಕರ ಕೈಯಲ್ಲಿ ಒಳಚರಂಡಿ ರಿಪೇರಿ ಮಾಡಿಸಿದ ಘಟನೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಇನ್ಫಾಂಟ್ರಿ ರಸ್ತೆಯಲ್ಲಿ ನಡೆದಿದೆ.
ಇಬ್ಬರು ಕಾರ್ಮಿಕರು ಬ್ಲಾಕ್ ಆಗಿದ್ದ ಒಳಚರಂಡಿ ನೀರನ್ನು ಬಕೆಟ್ ಮೂಲಕ ತೆಗೆದು ಹೊರಹಾಕಿದ್ದಾರೆ, ಕಟ್ಟಡವೊಂದರಿಂದ ಸೀವೇಜ್ ನೀರು ಬ್ಲಾಕ್ ಆಗಿದೆ ಎಂಬ ಕಂಪ್ಲೈಂಟ್ ಬಂದಿತ್ತು
ಇದನ್ನು ಸರಿಪಡಿಸಲು ಯಂತ್ರೋಪಕರಣ ಬಳಸದೆ ಕಾರ್ಮಿಕರನ್ನು ಬಳಸಿಕೊಂಡ ಸ್ಮಾರ್ಟ್ ಸಿಟಿ ಯೋಜನೆ ಸರ್ಕಾರದ ಸಂಸ್ಥೆಯಿಂದಲೇ ಕಾನೂನಿಗೆ ಕಿಮ್ಮತ್ತು ನೀಡದೆ ಕಾರ್ಮಿಕರ ಮೂಲಕ ನಿಷೇಧವಾದ ಕೆಲಸವನ್ನು ಮಾಡಿಸಿದ್ದಾರೆ.
PublicNext
09/09/2022 03:05 pm