ವರದಿ: ಗೀತಾಂಜಲಿ
ಬೆಂಗಳೂರು: ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಸರ್ವೇ ಸಾಮಾನ್ಯ. ಆದ್ರೆ ಇದೀಗ ಬೆಂಗಳೂರಿನಲ್ಲಿ ಶಾಲೆಗಳಿಂದ ಸಂಚಾರ ದಟ್ಟಣೆ ಹೆಚ್ಚಾಗ್ತಿದೆ. ಶಾಲಾ, ಕಾಲೇಜುಗಳಿಂದ ವಾಹನ ಸವಾರರಿಗೆ ಕಿರಿಕಿರಿ ಶುರುವಾಗಿದೆ. ನಗರದಲ್ಲಿ ಶಾಲಾ ವಾಹನ ಸೇರಿದಂತೆ ಮಕ್ಕಳನ್ನು ಬಿಡಲು ಬರುವ ಪೋಷಕರಿಂದಲೂ ಟ್ರಾಫಿಕ್ ಕಿರಿಕಿರಿ ಉಂಟಾಗ್ತಿದೆ. ಇನ್ನು ಮುಖ್ಯರಸ್ತೆಗಳಲ್ಲಿಯೇ ವಾಹನ ಪಾರ್ಕ್ ಮಾಡೋದರಿಂದಲೂ ತೊಂದರೆಯಾಗುತ್ತದೆ. ಹೀಗಾಗಿ ಇದೇ ಕಾರಣಕ್ಕೆ ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ರವಾನೆಯಾಗಿದೆ.
ಇನ್ನು ಶಾಲಾ ಕಾಲೇಜುಗಳು ಮಾರ್ಗಸೂಚಿ ಪಾಲನೆ ಮಾಡುವಂತೆ ನೋಟೀಸ್ ನೀಡಲಾಗಿದೆ. ಎಲ್ಲಾ ಶಾಲೆಗಳ ಬಳಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡುವುದು ಸಾಧ್ಯವಿಲ್ಲ. ಹಾಗಾಗಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲೆಗಳೇ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು. ಸೆಕ್ಯೂರಿಟಿ ಗಾರ್ಡ್‌ಗಳನ್ನೇ ಟ್ರಾಫಿಕ್ ಕಂಟ್ರೋಲ್ ಮಾಡಲು ನೇಮಿಸಬೇಕು. ಇನ್ನು ಇವರಿಗೆ ಅದರ ತರಬೇತಿ ನೀಡಲು ಟ್ರಾಫಿಕ್ ಪೊಲೀಸರು ಸಿದ್ಧವಾಗಿದ್ದಾರೆ. ಅದಕ್ಕೆ ಬೇಕಾಗುವ ತರಬೇತಿಯನ್ನೂ ಈಗಾಗಲ್ಲೇ ಟ್ರಾಫಿಕ್ ಪೊಲೀಸರು ನೀಡ್ತಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಗಳಿಗೆ ಟ್ರಾಫಿಕ್ ಕಂಟ್ರೋಲ್ ತರಬೇತಿ ನೀಡುತ್ತಾ.ಎಲ್ಲಾ ಶಾಲೆಗಳು ಈ ನಿಯಮಗಳನ್ನು ಪಾಲಿಸಲೇಬೇಕು .ಶಾಲಾ ವಾಹನಗಳನ್ನು ಆಯಾ ಶಾಲೆಯ ಪಾರ್ಕಿಂಗ್ ಜಾಗದಲ್ಲೇ ಪಾರ್ಕ್ ಮಾಡಬೇಕು. ರಸ್ತೆಯಲ್ಲಿ ನಿಲ್ಲಿಸಿದ್ರೆ ಸೀಜ್ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
Kshetra Samachara
21/07/2022 02:05 pm